
ಮಂಗಳೂರು-ಬೆಂಗಳೂರು ಸ್ಲೀಪರ್ ಅಂಬಾರಿ ಉತ್ಸವ ಬಸ್ಗಳ ಚಾಲನೆ
Thursday, December 26, 2024
ಮಂಗಳೂರು: ಕೆಎಸ್ಆರ್ಟಿಸಿ ಮಂಗಳೂರು ವಿಭಾಗಕ್ಕೆ 4 ಹೊಸ ಎಸಿ ಸ್ಲೀಪರ್ ಅಂಬಾರಿ ಉತ್ಸವ ಪ್ರತಿಷ್ಠಿತ ವಾಹನಗಳು ಸೇರ್ಪಡೆಗೊಂಡಿವೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕುಂದಾಪುರ-ಮಂಗಳೂರು-ಹಾಸನ ಬೆಂಗಳೂರು ಹಾಗೂ ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಹೊಸ ಎಸಿ ಸ್ಲೀಪರ್ ಅಂಬಾರಿ ಉತ್ಸವ ಬಸ್ಗಳು ಸಂಚರಿಸಲಿವೆ.
ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ 10.15ಕ್ಕೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ರಾತ್ರಿ 11.01ಕ್ಕೆ ಹೊರಡಲಿದೆ. ಕುಂದಾಪುರದಿಂದರಾತ್ರಿ 8.30 ಕ್ಕೆ ಹಾಗೂ ಬೆಂಗಳೂರಿನಿಂದ ರಾತ್ರಿ 8.30 ಕ್ಕೆ ಹೊರಡಲಿದೆ.
ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ:7760990720, ಮಂಗಳೂರು ಮುಂಗಡ ಬುಕಿಂಗ್ ಶಾಖೆ: 9663211553, ಕುಂದಾಪುರ ಬಸ್ ನಿಲ್ದಾಣ:9663266009 ಸಂಪರ್ಕಿಸುವಂತೆ ಮಂಗಳೂರು ವಿಭಾಗ ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.