ನಾಳೆ ಬೃಹತ್ ಕಾಲ್ನಡಿಗೆ ಜಾಥಾ: ಮೊಹಮ್ಮದ್ ಶಾಫಿ

ನಾಳೆ ಬೃಹತ್ ಕಾಲ್ನಡಿಗೆ ಜಾಥಾ: ಮೊಹಮ್ಮದ್ ಶಾಫಿ

ಮಂಗಳೂರು: ಬಜಪೆ ಲೆಜೆಂಡ್ಸ್ ವತಿಯಿಂದ ನಡೆಯುತ್ತಿರುವ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ಅಂಗವಾಗಿ ಡಿ.27ರಂದು ಬಜಪೆ ಬಸ್ ನಿಲ್ದಾಣದಿಂದ ತಾರಿಕಂಬ್ಳ ಜೋಹರ ಎಮ್. ಮೈದಾನದವರೆಗೆ ನಡೆಯುವ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಶಾಫಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜಪೆ ಲೆಜೆಂಡ್ಸ್ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಉದ್ದೇಶಗಳನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿದ್ದು, ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಡ್ರಗ್ಸ್ ಮಾದಕ ವ್ಯಸನ ವಿರುದ್ಧ ಯುವ ಪೀಳಿಗೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷದ ಅಭಿಯಾನದಲ್ಲಿ ಬಜಪೆ ಫೆಸ್ಟ್ ಎಂಬ ಹೆಸರಿನಲ್ಲಿ ಮಹಿಳೆಯರ ಸ್ಪರ್ಧಾ ಕೂಟ ನಡೆಸಿ ಅರಿವು ಮೂಡಿಸಲಾಯಿತು. ಮುಂದಿನ ಭಾಗವಾಗಿ ಬಜಪೆ ತಾರಿಕಂಬ್ಳ ಜೋಹರ ಎಮ್. ಮೈದಾನದಲ್ಲಿ ಬಜಪೆ ಫುಡ್ ಫೆಸ್ಟ್ ಹಾಗೂ 40ವರ್ಷ ಮೇಲ್ಪಟ್ಟ ಪುರುಷರಿಗೆ ಅಂಡರ್ ಆರ್ಮ್ ಹಾಗೂ 17ವರ್ಷ ಕೆಳಗಿನ ವಿದ್ಯಾರ್ಥ್ಗಿಳಿಗೆ ಒವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಮಹತ್ವಾಕಾಂಕ್ಷೆಯ ಯೋಜನೆಗಳು: ಬಜಪೆಯಲ್ಲಿ ಶೈಕ್ಷಣಿಕ ಅಕಾಡೆಮಿ ಸ್ಥಾಪಿಸಿ ಐಎಎಸ್, ಐಪಿಎಸ್ ತರಬೇತಿ ನೀಡಲಾಗುವುದು. ಸುಸಜ್ಜಿತ ಕ್ರೀಡಾ ಅಕಾಡೆಮಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಡಿ.27ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ  ತಾರಿಕಂಬ್ಳ ಜೋಹರ ಎಮ್. ಮೈದಾನದಲ್ಲಿ  ನಡೆಯುವ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ತಂಡದ ಮಾಜಿ ಕಪ್ತಾನ ಲೆಜೆಂಡ್ ಮೊಹಮ್ಮದ್ ಅಜರುದ್ದೀನ್ ಹಾಗೂ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಹನ್ ಕಾರ್ಪೊರೇಷನ್ ಎಂ.ಡಿ. ರೋಹನ್ ಮೋಂತೆರೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್.ಸಿ. ಮಂಜುನಾಥ್, ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಝಕಾರಿಯಾ ಜೋಕಡೆ, ಹೈದರಾಲಿ ಮತ್ತಿತರರು ಉಪಸ್ಥಿತರಿರುವರು ಎಂದರು.

ಪ್ರಧಾನ ಕಾರ್ಯದರ್ಶಿ ಅಕ್ತರ್ ರಮ್ಲಾನುದ್ದೀನ್, ಉಪಾಧ್ಯಕ್ಷರಾದ ಝುಬೇರ್ ಬಿ.ಯು., ಮೊಹಮ್ಮದ್ ಹಕೀಂ, ಕೋಶಾಧಿಕಾರಿ ಎಂ. ಅಲ್ತಾಫ್, ಕಾರ್ಯಕಾರಿ ಸಮಿತಿ ಸದಸ್ಯ ರಿಯಾಝ್, ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article