
ಶಿವಮೊಗ್ಗದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾನಿಲಯದೊಂದಿಗೆ ಆಳ್ವಾಸ್ ಇಂಜಿನಿಯರಿಂಗ್ ಒಪ್ಪಂದ
ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಶೈಕ್ಷಣಿಕ ಸಹಯೋಗವನ್ನು ಬೆಳೆಸಲು ಪ್ರತಿಷ್ಠಿತ ಕೆಳದಿ ಶಿವಪ್ಪ ನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಇತ್ತೀಚೆಗೆ ಮೂಡುಬಿದಿರೆಯ ಮಿಜಾರಿನಲ್ಲಿ ಒಪ್ಪಂದಕ್ಕೆ ವಿಧ್ಯುಕ್ತಗೊಳಿಸಲಾಯಿತು. ಶಿವಮೊಗ್ಗದ ಕೆಳದಿ ಶಿವಪ್ಪ ನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪರವಾಗಿ ಡಾ. ಕೆ.ಸಿ. ಶಶಿದರ್ ರಿಜಿಸ್ಟ್ರಾರ್ ಮತ್ತು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪ್ರಾಂಶುಪಾಲ ಡಾ. ಪೀಟರ್ ಫರ‍್ನಾಂಡಿಸ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಳದಿ ಶಿವಪ್ಪ ನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಕೆಎಸ್‌ಎನ್‌ಯುಎಎಚ್‌ಎಸ್) ಕುಲಪತಿ ಡಾ. ಆರ್.ಸಿ. ಜಗದೀಶ್, ಆಳ್ವಾಸ್ ಕೃಷಿ ಎಂಜಿನಿಯರಿಂಗ್ ವಿದ್ಯರ‍್ಥಿಗಳು ಮತ್ತು ಅಧ್ಯಾಪಕರು ಮತ್ತು ಕೃಷಿ ವಿಜ್ಞಾನಿಗಳು ಜಂಟಿಯಾಗಿ ವಿವಿಧ ಯೋಜನೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವೆ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ನಾವು ಮುಕ್ತ ಆಹ್ವಾನವನ್ನು ನೀಡುತ್ತೇವೆ. ಈ ಪಾಲುದಾರಿಕೆಯು ಶೈಕ್ಷಣಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಎರಡೂ ಸಂಸ್ಥೆಗಳಿಗೆ ಶೈಕ್ಷಣಿಕ-ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸುತ್ತದೆ.
ಡಾ. ಕೆ.ಸಿ. ಶಶಿದರ್ ರಿಜಿಸ್ಟ್ರಾರ್ ಕೆ.ಎಸ್.ಎನ್.ಯು.ಎ.ಎಚ್.ಎಸ್ ಅವರು ಈ ಒಡಂಬಡಿಕೆಯೊಂದಿಗೆ ಎರಡೂ ಸಂಸ್ಥೆಗಳು ಜಂಟಿಯಾಗಿ ವಿವಿಧ ಯೋಜನೆಗಳಲ್ಲಿ ಅಧ್ಯಾ ಪಕರು ಮತ್ತು ಕೃಷಿ ವಿಜ್ಞಾನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ಸಂಶೋಧನಾ ಪ್ರಬಂಧ ಮತ್ತು ಪೇಟೆಂಟ್ ಅನ್ನು ಪ್ರಕಟಿಸುತ್ತವೆ ಮತ್ತು ದರ‍್ಘಾವಧಿ ಮತ್ತು ಅಲ್ಪಾವಧಿಯ ಗುರಿಗಳೊಂದಿಗೆ ಜಂಟಿ ಪ್ರಾಯೋಜಿತ ಸಲಹಾ ಮತ್ತು ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತವೆ. ವಿವಿಧ ರೀತಿಯ ಧನಸಹಾಯ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತವೆ.
ಪ್ರಸ್ತುತ ಈ ಒಡಂಬಡಿಕೆಗೆ ವಿದ್ಯರ‍್ಥಿ ಮತ್ತು ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳು, ತರಬೇತಿ, ಪ್ರಸ್ತುತಿಗಳು, ಇಂರ‍್ನ್‌ಶಿಪ್ ಕರ‍್ಯಕ್ರಮ ಮತ್ತು ಸಮ್ಮೇಳನಗಳು ಸೇರಿದಂತೆ ವಿವಿಧ ಉಪಕ್ರಮಗಳನ್ನು ಒಳಗೊಂಡಿದೆ. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪ್ರಾಂಶುಪಾಲ ಡಾ. ಪೀಟರ್ ಫರ‍್ನಾಂಡಿಸ್, ಡಾ.ಕೆ.ವಿ. ಸುರೇಶ್, ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರು, ಕೃಷಿ ಇಂಜಿನಿಯರಿಂಗ್, ಡಾ. ದಿವಾಕರ ಶೆಟ್ಟಿ ಡೀನ್ ಅಕಾಡೆಮಿಕ್ಸ್, ಡಾ.ಶಶಿಕಾಂತ್ ಕರಿಂಕ, ಸಿಒಇ ಮತ್ತು ಡಾ. ಧನಂಜಯ ಸಹ ಸಂಶೋದನ ನರ‍್ದೇಶಕರು ಮತ್ತು ಡಾ. ಶಂಕರ್, ಕೃಷಿ ವಿಜ್ಞಾನಿಗಳು ಕೆವಿಕೆ ಬ್ರಹ್ಮಾವರ ಮತ್ತು ಡಾ. ಮಾರುತೇಶ್, ಕೃಷಿ ವಿಜ್ಞಾನಿಗಳು, ಕೆವಿಕೆ ಉಳ್ಳಾಲ್ ಮತ್ತು ಇತರ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.