
ನಕಲಿ ಆಭರಣ ಸಾಲ: ಆರೋಪಿ, ಬ್ಯಾಂಕ್‌ನ ಸರಪ ವಿವೇಕ್ ಆಚಾರ್ಯ ಸೆರೆ
ಮಂಗಳೂರು: ಸಮಾಜ ಸೇವಾ ಸಹಕಾರಿ ಸಂಘದ ಪಡೀಲ್ ಶಾಖೆಯಲ್ಲಿ ಪುತ್ತೂರು ಈಶ್ವರಮಂಗಲದ ಅಬೂಬಕರ್ ಸಿದ್ದೀಕ್ ಎಂಬವರಿಗೆ ನಕಲಿ ಆಭರಣ ಈಡಿನ ಆಧಾರದಲ್ಲಿ 2,11, 89,800 ರೂ. ಸಾಲ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಹಾಗೂ ಬ್ಯಾಂಕ್‌ನ ಸರಪ ವಿವೇಕ್ ಆಚಾರ್ಯ ಅವರನ್ನು ಪೊಲೀಸರು ಬಂಸಿದ್ದಾರೆ ಎಂದು ಸಂಘದ ಮಾಜಿ ನಿರ್ದೇಶಕ ಲೋಕನಾಥ ಡಿ. ತಿಳಿಸಿದರು.
ಆರೋಪಿ ಅಬೂಬಕ್ಕರ್ ಸಿದ್ದೀಕ್ ಎಂಬವರು 20 ಆಭರಣ ಈಡಿನ ಆಧಾರದಲ್ಲಿ 2,11,89,800 ರೂ ಸಾಲವನ್ನು ಪಡೆದಿದ್ದರು. ಈ ಸಾಲವನ್ನು ಶಾಖೆಯ ಪ್ರಭಾರ ವ್ಯವಸ್ಥಾಪಕ ಪ್ರಶಾಂತ್ ಎಂಬವರು ಸರಫರ ಶಿಫಾರಸಿನ ಮೇರೆಗೆ ನೀಡಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ಈ ಸಾಲವನ್ನು 2023ರ ನವೆಂಬರ್ 13ರಿಂದ 2024ರ ಫೆಬ್ರವರಿ 3ರ ಅವಯಲ್ಲಿ ನೀಡಲಾಗಿತ್ತು. ಈ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಸಂಘದ ಹಿರಿಯ ಸದಸ್ಯರು ಮೈಸೂರಿನ ನಿಬಂಧಕರಿಗೆ ದೂರು ಅರ್ಜಿಯನ್ನು ಏಪ್ರಿಲ್ 10ರಂದು ಸಲ್ಲಿಸಿದ್ದರು. ಬಳಿಕ ಜುಲೈ 1ರಂದು ಜಿಲ್ಲಾಕಾರಿ, ಪೊಲೀಸ್ ವರಿಷ್ಠಾಕಾರಿಗೂ ದೂರು ಸಲ್ಲಿಸಲಾಗಿತ್ತು. ಮೈಸೂರು ನಿಬಂಧಕರು, ಉಸ್ತುವಾರಿ ಸಚಿವರು ಹಾಗೂ ದ.ಕ.ಜಿಲ್ಲಾಕಾರಿ ಮಂಗಳೂರು ಉಪ ನಿಬಂಧಕರಿಗೆ ನೋಟೀಸು ಜಾರಿ ಮಾಡಿ ತನಿಖೆಗೆ ಆದೇಶಿಸಿದ್ದರು. ಆದರೆ ಮಂಗಳೂರು ಉಪ ನಿಬಂಧಕರು ನಮಗೆ ಹೇಳಿಕೆ ದಾಖಲಿಸಲು ಅವಕಾಶ ನೀಡದೆ ಶಾಸನಬದ್ಧ ತನಿಖೆಗೆ ಶಿಫಾರಸು ಮಾಡಿ ತನಿಖೆ ಮುಕ್ತಾಯಗೊಳಿಸಿ ಹಿಂಬರಹ ನೀಡಿದ್ದರು.
ಪೊಲೀಸ್ ವರಿಷ್ಠಾಕಾರಿಯವರು ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಆರೋಪ ನಿರಾಕರಿಸಿ ಸುಳ್ಳು ಹೇಳಿಕೆ ನೀಡಿದ್ದರು. ಬಳಿಕ ಪ್ರಕರಣ ಕಮಿಷನರೇಟ್ ವ್ಯಾಪ್ತಿಗೆ ಬರುವುದಾಗಿ ಹೇಳಿ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿತ್ತು. ಈ ನಡುವೆ ನಕಲಿ ಚಿನ್ನಾಭರಣದ ಹರಾಜು ಪ್ರಕ್ರಿಯೆ ಗುಪ್ತ ಸ್ಥಳದಲ್ಲಿ ನಡೆಸಲಾಗಿತ್ತು. ಒಟ್ಟು ಸಾಲದಲ್ಲಿ 1.31 ಕೋಟಿ ರೂ. ಬಾಕಿ ಇದ್ದು, ಸಂಘಧ ನಿಯಮದ ಪ್ರಕಾರ ಸಾಲಗಾರರೊಬ್ಬರಿಗೆ ಒಂದು ದಿನದಲ್ಲಿ 20 ಲಕ ರೂ. ಮಾತ್ರ ಚಿನ್ನಾಭರಣ ಸಾಲ ನೀಡಬಹುದಾಗಿದ್ದರೂ ನಿಯಮ ಉಲ್ಲಂಘಿಸಲಾಗಿದೆ. ಪ್ರಕರಣದ ಬಗ್ಗೆ ಕಮಿಷನರ್ರನ್ನು ಭೇಟಿಯಾಗಿ ವಿವರಿಸಿದ ಬಳಿಕ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಆರೋಪಿ ಸರಫ ವಿವೇಕ್‌ಆಚಾರ್ಯರ ಬಂಧನವಾಗಿದೆ ಎಂದು ವಿವರಿಸಿದರು.
ಸಂಘದ ಹಿರಿಯ ಸದಸ್ಯರಾದ ಹೇಮಂತ ಸಾಲಿಯಾನ್, ಸೇಸಪ್ಪ ಟಿ., ಸೋಮಯ ಎಚ್., ಸುಂದರ ಬಿ., ರಮೇಶ್ ಬಿ. ಉಪಸ್ಥಿತರಿದ್ದರು.