ಜನಪರ ನೀತಿಗಳನ್ನು, ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಧಮನಿಸುತ್ತಿರುವ ಪೊಲೀಸ್ ಕಮೀಷನರ್

ಜನಪರ ನೀತಿಗಳನ್ನು, ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಧಮನಿಸುತ್ತಿರುವ ಪೊಲೀಸ್ ಕಮೀಷನರ್


ಮಂಗಳೂರು: ಜನಪರ ನೀತಿಗಳನ್ನು, ಪ್ರತಿಭಟನೆಗಳನ್ನು ನಿರಾಕರಿಸಿ, ಪ್ರಜಾಪ್ರಭುತ್ವದ ಹಕ್ಕುಗಳನ್ನು ಧಮನಿಸುತಿರುವ ಪೊಲೀಸ್ ಕಮೀಷನರ್ ಅನುಪಮ ಅಗರ್ವಾಲ್ ವರ್ಗಾವಣೆಗೆ ಒತ್ತಾಯಿಸಿ ಉರ್ವ ಸ್ಟೋರ್ ಜಂಕ್ಷನ್‌ನಲ್ಲಿ ಸಿಪಿಎಂ ಉರ್ವಸ್ಟೋರ್ ಶಾಖೆ ಮತ್ತು ಡಿವೈಎಫ್‌ಐ ಉರ್ವ ಸ್ಟೋರ್ ಘಟಕದ ವತಿಯಿಂದ ಡಿ.9 ರಂದು ಪ್ರತಿಭಟನೆ ನಡೆಸಲಾಯಿತು. 

ಮುಖ್ಯ ಅತಿಥಿಗಳಾಗಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮತ್ತು ಸಿಪಿಎಂ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್ ಭಾಗವಹಿಸಿದ್ದರು. 

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಪಿಐಮ್ ನಗರ ಕಾರ್ಯದರ್ಶಿಯಾದ ಯೋಗೀಶ್ ಜಪ್ಪಿನಮೊಗರು ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿದರು. 

ಪ್ರತಿಭಟನೆ ನೇತೃತ್ವವನ್ನು ಊರ್ವ ಸ್ಟೋರ್ ಮುಖಂಡರುಗಳಾದ ಮನೋಜ್ ಕುಲಾಲ್, ಪ್ರಶಾಂತ್ ಎಂ.ಬಿ, ರಾಜೇಶ್ ಕುಲಾಲ್, ಪ್ರಶಾಂತ್ ಆಚಾರ್ಯ, ಸುಕೇಶ್, ಪುನೀತ್, ಇಕ್ಬಾಲ್, ರಘುವೀರ್, ಅಶೋಕ್ ಶ್ರೀಯಾನ್, ಪ್ರಕಾಶ್ ಕೊಟ್ಟಾರಿ, ಮಲ್ಲೇಶ್, ಹರಿನಾಕ್ಷಿ ಮತ್ತಿತರರು ವಹಿಸಿದ್ದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article