ಮಂಜನಾಡಿ ಗ್ಯಾಸ್ ಸ್ಫೋಟ ದುರಂತ, ಗುಣಮುಖರಾಗದ ಸಹೋದರಿಯ ಹೆಚ್ಚುವರಿ ಚಿಕಿತ್ಸೆಯ ಜವಾಬ್ದಾರಿ ಮುನೀರ್ ಕಾಟಿಪಳ್ಳ ವಹಿಸಿಕೊಳ್ಳಿ: ಎನ್.ಎಸ್. ಕರೀಮ್

ಮಂಜನಾಡಿ ಗ್ಯಾಸ್ ಸ್ಫೋಟ ದುರಂತ, ಗುಣಮುಖರಾಗದ ಸಹೋದರಿಯ ಹೆಚ್ಚುವರಿ ಚಿಕಿತ್ಸೆಯ ಜವಾಬ್ದಾರಿ ಮುನೀರ್ ಕಾಟಿಪಳ್ಳ ವಹಿಸಿಕೊಳ್ಳಿ: ಎನ್.ಎಸ್. ಕರೀಮ್


ಮಂಗಳೂರು: ಮಂಜನಾಡಿ ಗ್ಯಾಸ್ ಸ್ಫೋಟ ದುರಂತದಲ್ಲಿ ನಾಲ್ಕು ಜನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟು ಒಬ್ಬರು ಬದುಕುಳಿದಿದ್ದಾರೆ. ನಾವು ನೆರೆಕರೆ ಊರವರು ಕುಟುಂಬಸ್ಥರು ಸೇರಿಕೊಂಡು ನಮ್ಮ ಅನುಭವ ಹಾಗೂ ಜವಾಬ್ದಾರಿಗೆ ತಕ್ಕಂತೆ ನಾಲ್ಕು ಜನರನ್ನು ಉಳಿಸಲು ಸತತ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಅಲ್ಲಾಹನ ವಿಧಿಯಿಂದ ಮೂರು ಜನ ಮೃತಪಟ್ಟು ಒಬ್ಬರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಗೀಚುವ ಮುನೀರ್ ಕಾಟಿಪಳ್ಳ ಹಾಗೂ ಅವರ ಕೂಟದವರ ಪ್ರಕಾರ ನಮ್ಮ ಜವಾಬ್ದಾರಿ ಹಾಗೂ ಪ್ರಾಮಾಣಿಕತೆ ಸಾಕಾಗದೇ ಇದ್ದರೆ, ಅತ್ಯಂತ ಅನುಭವ, ಜವಾಬ್ದಾರಿ ಪ್ರಾಮಾಣಿಕತೆ ಇರುವ ನೀವು ಮುಂದೆ ಬಂದು ಬದುಕುಳಿದಿರುವ ಆ ಹೆಣ್ಣುಮಗಳ ಮುಂದಿನ ಚಿಕಿತ್ಸೆ ಹಾಗೂ ಉನ್ನತ ಮಟ್ಟದ ತನಿಖೆಯ ಜವಾಬ್ದಾರಿಯನ್ನು ಬಂದು ವಹಿಸಿ ಗ್ಯಾಸ್ ಏಜೆನ್ಸಿಯಿಂದ ಈಗಿನ ಮೊತ್ತಕಿಂತ ಹೆಚ್ಚಿನ ಪರಿಹಾರ ತೆಗೆಸಿ ಕೊಟ್ಟರೆ ನಮಗೆ ಬಹಳಷ್ಟು ಸಂತೋಷ.

ಆದರೆ ಸಮಗ್ರ ತನಿಖೆಯಾಗಿ ಈಗ ಸಿಗುವ ಪರಿಹಾರವೂ ಸಿಗದೇ ಹೋದರೆ ಅದರ ಜವಾಬರಿಯನ್ನು ಕೂಡಾ ನೀವೇ ವಹಿಸಿಕೊಳ್ಳಬೇಕು ಎಂದು ನಮ್ಮ ಎಲ್ಲಾ ಊರವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆಂದು ಕಾಂಗ್ರೆಸ್ ಮುಖಂಡ ಎನ್.ಎಸ್. ಕರೀಮ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article