ಕದ್ರಿ ಪಾರ್ಕ್‌ನಲ್ಲಿ ವೈನ್ ಮೇಳ ಬೇಡ: ಒತ್ತಾಯ

ಕದ್ರಿ ಪಾರ್ಕ್‌ನಲ್ಲಿ ವೈನ್ ಮೇಳ ಬೇಡ: ಒತ್ತಾಯ

ಮಂಗಳೂರು: ಸಾರ್ವಜನಿಕರ ವಿಹಾರದ ಕದ್ರಿ ಪಾರ್ಕ್‌ನಲ್ಲಿ ವೈನ್ ಮೇಳ ಮಾಡಬಾರದು. ಇಂತಹ ಮೇಳಗಳ ವೇಳೆ ಅಧಿಕಾರಿಗಳು ಕೂಡಾ ರಾಜಾರೋಷವಾಗಿ ತಮ್ಮ ವಾಹನಗಳನ್ನು ಪಾರ್ಕ್ ಒಳಗೆ ಕೊಂಡೊಯ್ಯುತ್ತಾರೆ. ಇಂತಹ ಮೇಳಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲಿ ಇಂತಹ ಮೇಳಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರಾದ ಅಮಲ ಜ್ಯೋತಿ ಎಂಬವರು ಒತ್ತಾಯಿಸಿದರು.

ಅವರು ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ಸಿದ್ಧಾಥ್‌ರ್ ಗೋಯಲ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ಕುರಿತು ಮಾತನಾಡಿದರು.

ನಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿತ್ ಕುಮಾರ್ ಎಂಬವರ ಶಾಲಾ ಕಾಲೇಜು ದಾಖಲಾತಿ ಮೂಲ ಪ್ರತಿ ತೆಗೆದಿರಿಸಿ ಕಿರುಕುಳ  ನೀಡುತ್ತಿರುವ ಬಗ್ಗೆ ದೂರು ನೀಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಾಂಶುಪಾಲರನ್ನು ಕರೆಸಿ ವಿಚಾರಣೆ ಮಾಡಿ ಕ್ರಮ ವಹಿಸುವ ಬದಲು ಉಪ ಪ್ರಾಂಶುಪಾಲರನ್ನು ಕರೆಸಿ  ತನಿಖೆ ನಡೆಸಲಾಗಿದೆ. ಇದು ಸರಿಯಲ್ಲ ಎಂದು ಎಸ್.ಪಿ. ಆನಂದ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಎಸಿಪಿಯವರಲ್ಲಿ ವಿಚಾರಿಸಿ ಆಗಿರುವ ಕ್ರಮದ ಬಗ್ಗೆ ತಿಳಿಸುವುದಾಗಿ ಡಿಸಿಪಿ ಸಿದ್ಧಾಥ್‌ರ್ ಗೋಯಲ್ ತಿಳಿಸಿದಾಗ, ಇದರಿಂದ ತೃಪ್ತರಾಗದ ಆನಂದ್, ಈ ರೀತಿ  ಮತ್ತೆ ಉತ್ತರಕ್ಕಾಗಿ ಒಂದು ತಿಂಗಳು ಕಾಯುವ ಪರಿಸ್ಥಿತಿ ಸರಿಯಲ್ಲ. ಇಂತಹ ದೌರ್ಜನ್ಯದ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮದ ಬಗ್ಗೆ ಗಮನ ಹರಿಸಲಾಗುತ್ತಿಲ್ಲ  ಎಂದು ಹೇಳಿ ವೇದಿಕೆಯ ಎದುರು ಧರಣಿಗೆ ಮುಂದಾದರು.

ಇದರಿಂದ ಬೇಸರಗೊಂಡ ಡಿಸಿಪಿ, ನಾನು ಈಗಾಗಲೇ ಈ ಬಗ್ಗೆ ಎಸಿಪಿ ಬಳಿ ವಿಚಾರಿಸುವುದಾಗಿ ತಿಳಿಸಿದರೂ ಈ ರೀತಿ ಪ್ರತಿಭಟಿಸುವುದು ಸರಿಯಲ್ಲ. ಪ್ರಾಂಶುಪಾಲರು ಅ ನಾರೋಗ್ಯದ ಕಾರಣ ಉಪಪ್ರಾಂಶುಪಾಲರನ್ನು ವಿಚಾರಿಸಲಾಗಿದೆ. ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದರೂ, ಈ ರೀತಿ ಮಾಡುವುದರಿಂದ ಇತರರಿಗೂ ತಮ್ಮ ಅಹವಾಲು  ನೀಡಲು ತೊಂದರೆಯಾಗುತ್ತದೆ ಎಂದರು. 

ನಮಗೆ ನ್ಯಾಯ ಸಿಗುತ್ತಿಲ್ಲ. ಪ್ರಕರಣ ದಾಖಲಿಸಿ ದಸ್ತಗಿರಿ ಮಾಡುವ ಬದಲು ನಮ್ಮನ್ನೂ ಸತಾಯಿಸಲಾಗುತ್ತಿದೆ ಎಂದು ಎಸ್.ಪಿ. ಆನಂದ್‌ಹೇಳಿದಾಗ , ಹಾಗಿದ್ದರೆ  ಸಂಜೆಯದರೂ ಈ ವಿಷಯದಲ್ಲೇ ಮಾತನಾಡೋಣ, ಬೇರೆ ವಿಷಯಗಳ ಚರ್ಚೆ ಬೇಡ ಎಂದು ಡಿಸಿಪಿಯವರೂ ಅಸಮಾಧಾನ ತೋರಿದಾಗ, ಅಲ್ಲಿದ ಇತರ ಪೊಲೀಸ್  ಅಧಿಕಾರಿಗಳು ಆನಂದ್‌ರವರನ್ನು ಸಮಾಧಾನಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article