
‘ಯೋಗ ನಿದ್ರಾಸನ’: ಪ್ರಿನ್ಸಿಟಾ ವಿಯೆನ್ನ ಡಿ’ಸೋಜಾ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆ
Tuesday, December 3, 2024
ಮಂಗಳೂರು: ‘ಯೋಗ ನಿದ್ರಾಸನ’ಪ್ರದರ್ಶನದಲ್ಲಿ ವಿಶೇಷ ಸಾಧನೆ ತೋರುವ ಮೂಲಕ ನಗರದ ಫಳ್ನೀರ್ ಸೈಂಟ್‌ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಿನ್ಸಿಟಾ ವಿಯೆನ್ನ ಡಿ’ಸೋಜಾ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಗಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಂದು ಯೋಗ ತರಬೇತುದಾರೆ ಕವಿತಾ ಅಶೋಕ್, ಸತತ 40ನಿಮಿಷ 15 ಸೆಕೆಂಡ್ ಯೋಗ ನಿದ್ರಾಸನ ಮಾಡುವ ಮೂಲಕ ಪ್ರಿನ್ಸಿಟಾ ಅವರು ಈ ಹಿಂದಿನ 19 ನಿಮಿಷದ ದಾಖಲೆಯನ್ನು ಮುರಿದಿದ್ದಾರೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ಮೈಸೀ ಎ.ಸಿ ಅವರು ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿನಿಯ ಸಾಧನೆ ಹೆಮ್ಮೆ ತಂದಿದೆ. ಸಂಸ್ಥೆ ಆಕೆಯನ್ನು ಗೌರವಿಸಲಿದೆ ಎಂದರು.
ಸಾಧಕಿ ಪ್ರಿನ್ಸಿಟಾ ವಿಯೆನ್ನ ಡಿ’ಸೋಜಾ ಅವರು ಮಾತನಾಡಿ, ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು, ಯೋಗಶಿಕ್ಷಕರು ಹಾಗೂ ಹೆತ್ತವರ ಸಹಕಾರದಿಂದ ಈ ಯೋಗ ಸಾಧನೆ ಸಾಧ್ಯವಾಗಿದೆ ಎಂದರು.
ಸಹಾಯಕ ಮುಖ್ಯಶಿಕ್ಷಕಿ ಸಿಗ್ರೇಸಿ ಲೋಬೊ, ಹೆತ್ತವರಾದ ಪ್ರವೀಣ್ ನೇರಿ ಡಿ’ಸೋಜಾ ನಾಗುರಿ ಮತ್ತು ವಿನಿತಾ ಡಿ’ಸೋಜಾ, ಮಂಗಳಾ ಈಜುಕೊಳದ ಸಿಬಂದಿ ಚಂದ್ರಶೇಖರ್ ರೈ ಸೂರಿಕುಮೇರು ಉಪಸ್ಥಿತರಿದ್ದರು.