
ವಚನ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣ
ಮಂಗಳೂರು: ಮುಂದಿನ ಜನವರಿ ತಿಂಗಳ ಮೊದಲ ವಾರದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿರುವ "ವಚನ ಸಾಹಿತ್ಯ ಸಮ್ಮೇಳನ-2025 ರ ಲಾಂಛನ ಬಿಡುಗಡೆ ಸಮಾರಂಭ ಇತ್ತೀಚೆಗೆ ಜರುಗಿತು.
ನಗರದ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಆರಂಭಗೊಂಡಿರುವ ಸ್ವಾಗತ ಸಮಿತಿ ಕಚೇರಿಯಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲ ತೇಜೊಮಯ ಲಾಂಛನ ಅನಾವರಣಗೊಳಿಸಿ ಮಾತನಾಡಿದರು.
ಸಮಾಜವನ್ನು ಒಗ್ಗೂಡಿಸುವ ಶಕ್ತಿಯು ವಚನ ಸಾಹಿತ್ಯಕ್ಕಿದೆ, ವಚನ ಸಾಹಿತ್ಯದ ತತ್ವ ಸಿದ್ಧಾಂತಗಳು ಮುಂದಿನ ಪೀಳಿಗೆಗೆ ರವಾನೆಯಾಗುವಲ್ಲಿ ಸಮ್ಮೇಳನವು ಯಶಸ್ವಿಯಾಗಲೆಂದು ಹಾರೈಸಿದರು.
ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ ಕುಮಾರ ಕಲ್ಕೂರ, ಉರ್ವಸ್ಟೊರ್ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್,ಮಾಜಿ ಕಾರ್ಪೊರೇಟರ್ ರಾಧಾಕೃಷ್ಣ, ಲಾಂಛನಕರ್ತೃ ಸಂತ ಅಲೊಶಿಯಸ್ ಕಾಲೇಜಿನ ಕಲಾ ಶಿಕ್ಷಕ ಜಾನ್ ಚಂದ್ರನ್, ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘ, ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಸುಮಾ ಅರುಣ್ ಮಾನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಅತಿಥಿಗಳು ಸಮ್ಮೇಳನವು ಸರ್ವ ರೀತಿಯಲ್ಲೂ ಸಫಲತೆಯನ್ನು ಕಾಣುವಂತಾಗಲೆಂದು ಹಾರೈಸಿದರು.
ಹಿರಿಯ ಲೇಖಕಿ ಮೀನಾಕ್ಷಿ ರಾಮಚಂದ್ರ, ನಿವೃತ್ತ ಶಿಕ್ಷಕಿ ರತ್ನಾವತಿ ಬೈಕಾಡಿ, ಜಯಶ್ರೀ, ಪೂರ್ಣಿಮಾ ರಾವ್ ಪೇಜಾವರ, ಸುಮಾ ಪ್ರಸಾದ್, ಆಶಾ ಜಯದೇವ್, ಶಕುಂತಲಾ, ಚಂದ್ರಕಲಾ, ಭಾಗ್ಯಶ್ರೀ, ಅರುಣ್ ಮಾನ್ವಿ, ಬಸವರಾಜ್, ವಸಂತ್, ಮಲ್ಲಿಕಾರ್ಜುನ ಬಸವನಗುಡಿ, ಪ್ರಜ್ವಲ್ ಮಾನ್ವಿ ಉಪಸ್ಥಿತರಿದ್ದರು. ಮಣಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ಯಾಳವಾರ ಸ್ವಾಗತಿಸಿ, ಉಮಾ ಪಾಲಾಕ್ಷಪ್ಪ ವಂದಿಸಿದರು.