ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಅಭಯಚಂದ್ರ ಜೈನ್ ಸಲಹೆ

ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಅಭಯಚಂದ್ರ ಜೈನ್ ಸಲಹೆ


ಮೂಡುಬಿದಿರೆ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ, ನಾಟಕ, ಕ್ರೀಡೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡಾಗ ಪ್ರತಿಭೆ ಹೆಚ್ಚಿಸಲು ಪೂರಕವಾಗಿರುತ್ತದೆ ಎಂದು ಮಾಜಿ ಸಚಿವ, ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹೇಳಿದರು.

ಇಲ್ಲಿನ ಬಿ.ಆರ್.ಪಿ. ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಹೊಸ ವಿದ್ಯಾಸಂಸ್ಥೆಗಳು ತೆರೆದುಕೊಳ್ಳುವಾಗ ರಾಷ್ಟ್ರ ಕಟ್ಟಿದ ನಾಯಕರನ್ನು ಮರೆಯುವುದು ಸರಿಯಲ್ಲ. ರಾಷ್ಟ್ರಪ್ರೇಮದ ದ್ಯೋತಕವಾಗಿ ವಿದ್ಯಾಸಂಸ್ಥೆಗಳಿಗೆ ರಾಷ್ಟ್ರೀಯ ಹೆಸರನ್ನಿಟ್ಟು ರಾಷ್ಟ್ರಪ್ರೇಮ ಪ್ರದರ್ಶಿಸುವ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನ ಅಧ್ಯಕ್ಷ ಚಂದ್ರಶೇಖರ ರಾಜೆ ಅರಸ್ ಮಾತನಾಡಿ, ಹಿಂದೆ ಮಾತಾ ಪಿತೃಗಳಿಂದ ಮತ್ತು ಗುರುಕುಲ ವ್ಯವಸ್ಥೆಯಲ್ಲಿ ಮಕ್ಕಳು ವಿದ್ಯೆ ಕಲಿಯುತ್ತಿದ್ದರು. ಸ್ವಾತಂತ್ರ್ಯ ಬಂದೆ ನಂತರ ಮಕ್ಕಳು ಹೊರ ಪ್ರಪಂಚಕ್ಕೆ ತೆರೆದು ಕೊಳ್ಳಬೇಕಾದರೆ ಶಾಲಾ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಆರಿತು ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿತು. ಇಂದು ದೇಶದಲ್ಲಿ ಶಿಕ್ಷಣ ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದು ಸಾಮಾನ್ಯ ಜ್ಞಾನವೂ ಅಂಕಗಳಷ್ಟೆ ಮುಖ್ಯ ಎಂಬುದನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ನಿವೃತ್ತ ದೈಹಿಕ ಶಿಕ್ಷಣ ಅಧ್ಯಾಪಕ ಕ್ಲೆಮೆಂಟ್ ಡಿ’ಸೋಜ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಸಂಚಾಲಕ ರಾಮನಾಥ್ ಭಟ್, ಉಪಾಧ್ಯಕ್ಷರುಗಳಾದ ಪುಷ್ಪರಾಜ್ ಜೈನ್, ಪಿ. ರಾಮಪ್ರಸಾದ್ ಭಟ್, ಕೋಶಾಧಿಕಾರಿ ದಾಮೋದರ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು, ನಿವೃತ ಮುಖ್ಯೋಪಾಧ್ಯಾಯಿನಿ ಪದ್ಮಜಾ ಕೆ., ಮನೋಜ್ ಕುಮಾರ್ ಶೆಟ್ಟಿ, ವೆಂಕಟೇಶ್ ಕಾಮತ್, ನ್ಯಾಯವಾದಿ ಮನೋಜ್ ಶೆಣೈ, ಹಳೆ ವಿದ್ಯಾರ್ಥಿಗಳಾದ ದಿನೇಶ್ ಕಾಮತ್, ಸಚಿನ್ ಆಚಾರ್ಯ ಅವರು  ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. 

ವಿದ್ಯಾರ್ಥಿ ನಾಯಕ ಆಕಾಶ್ ಉಪಸ್ಥಿತರಿದ್ದರು.

ಶಾಲೆಗೆ ನಿರಂತರ ಸಹಕಾರ ನೀಡುತ್ತಿರುವ ಅಮೀನಾ, ರಾಘವೇಂದ್ರ ಶೆಟ್ಟಿ, ರಂಜನ್, ಯಜೇಶ್, ಕ್ರಿಸ್ಟಿನ್, ಗಣೇಶ್ ಪೈ, ಹರೀಶ್, ರಶ್ಮಿತಾ ಪ್ರಸಾದ್ ಶೆಟ್ಟಿ, ವಾಣಿಶ್ರೀ ಕಾಂತಾವರ ಅವರನ್ನು ಗೌರವಿಸಲಾಯಿತು. ಅತ್ಯುತ್ತಮ ವಿದ್ಯಾರ್ಥಿಗಳಾದ ಆಕರ್ಶ್ ಮತ್ತು ಹೇಮಾ ಅವರನ್ನು ಅಭಿನಂದಿಸಲಾಯಿತು.

ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಭಾಗೀರತಿ, ಅನುಶ್ ಆಚಾರ್ಯ ಮೇಘಾ, ಜೈನಾಬ್, ಅಂಕಿತಾ, ಕಿಶನ್ ಮತ್ತು ಸೋಮೇಶ್ ಅವರಲ್ಲದೆ ಪ್ರಸಕ್ತ ಸಾಲಿನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಯಿತು. ಮೇಬಲ್ ಮೆಂಡೋನಾ, ಪ್ರತಿಮಾ ಮತ್ತು ಭರತ್ ನಾಯ್ಕ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಶಂಕರ ಭಟ್ ಬಹುಮಾನಿತರ ಪಟ್ಟಿ ವಾಚಿಸಿದರು.

ಮುಖ್ಯೋಪಾಧ್ಯಾಯನಿ ತೆರೇಜಾ ಕರ್ಡೋಡಾ ವರದಿ ವಾಚಿಸಿದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿ, ಕಿರಣ್ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article