‘ಆಳ್ವಾಸ್ ವಿರಾಸತ್’ನಲ್ಲಿ 'ಸಿತಾರ್-ಜಿಟಾರ್ ‘ಸೌಂಡ್ ಆಫ್ ಇಂಡಿಯಾ’ ಕಾರ್ಯಕ್ರಮ
Saturday, December 14, 2024
ಮೂಡುಬಿದಿರೆ: 30ನೇ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ನಾಲ್ಕನೇ ದಿನವಾದ ಶುಕ್ರವಾರದಂಂದು ಮೊದಲ ಕಾರ್ಯಕ್ರಮವಾಗಿ ಸಿತಾರ್ ವಾದಕ ನೀಲಾದ್ರಿ ಕುಮಾರ್ ಅವರಿಂದ 'ಸಿತಾರ್-ಜಿಟಾರ್ ‘ಸೌಂಡ್ ಆಫ್ ಇಂಡಿಯಾ’ ಕಾರ್ಯಕ್ರಮ ಪ್ರಸ್ತುತಗೊಂಡಿದ್ದು ಇದು ಸಂಗೀತ ಕಲಾಭಿಮಾನಿಗಳನ್ನು ತಲೆದೂಗುವಂತೆ ಮಾಡಿತು.
ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್, ತಬಲಾದಲ್ಲಿ ಅಮಿತ್ ಕವಟೇಕರ್, ಕೀಬೋಡ್ ೯ದಲ್ಲಿ ಏಗ್ನೆಲೋ ಫೆರ್ನಾಂಡಿಸ್ ಅವರು ಸಾಥ್ ನೀಡುವ ಮೂಲಕ ಕಚೇರಿಯ ಇಂಪನ್ನು ಹೆಚ್ಚಿಸಿದರು.
ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಮೊದಲಿಗೆ ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಯಿತು.
ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ 'ಆಳ್ವಾಸ್ ಸಾಂಸ್ಕೃತಿಕ ವೈಭವ', ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಂಡಿತು. ಹಾಗೂ ಬೆಂಗಳೂರು ಕಾರ್ತೀಸ್ ಪರ್‌ಫಾರ್ಮಿಂಗ್ ಆರ್ಟ್ಸ್ ‘ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಮನಸೂರೆಗೊಂಡಿತು.








