
ಬೆಳುವಾಯಿಯಲ್ಲಿ ಹೈಟೆಕ್ ಜುಗಾರಿ
Thursday, December 5, 2024
ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಪೇಟೆಯ ಪಕ್ಕದಲ್ಲೇ ರಾತ್ರಿ ಹಗಲೆನ್ನದೆ ಹೈಟೆಕ್ ಜುಗಾರಿ ದಂಧೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಲ್ಲಿಯೇ ಕೆಲವು ದಿನಗಳ ಹಿಂದೆ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆದರೆ ಇದೀಗ ಮತ್ತೆ ದೊಡ್ಡ ಮಟ್ಟಿನಲ್ಲಿ ಪೇಟೆಯ ಪಕ್ಕದಲ್ಲೇ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.