
ಸಿಡಿಲು ಬಡಿದು ಪಂಚಾಯತ್ ಪಿಡಿಒ ಗಂಭೀರ
Thursday, December 5, 2024
ಪುತ್ತೂರು: ಪುತ್ತೂರಿನಲ್ಲಿ ಸಿಡಿಲು ಬಡಿದು ಬನ್ನೂರು ಪಂಚಾಯತ್ ಪಿಡಿಒ ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ.
ಚಿತ್ರಾವತಿ (40) ಗಂಭೀರವಾಗಿ ಗಾಯಗೊಂಡ ಪಿಡಿಒ.
ಸಿಡಿಲು ಬರುವ ಸಂದರ್ಭದಲ್ಲಿ ಕಛೇರಿಯ ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ಸಮಯದಲ್ಲೇ ಬಡಿದ ಸಿಡಿಲು ಗಂಭೀರವಾಗಿ ಗಾಯಗೊಂಡಿದ್ದ ಪಿಡಿಒ ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ ಪಂಚಾಯತ್ ಅಧ್ಯಕ್ಷೆ ಮತ್ತು ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮಪಂಚಾಯತ್ ಪಿಡಿಒ ಅವರನ್ನು ಪಂಚಾಯತ್ ಅಧ್ಯಕ್ಷೆ ಸ್ಮಿತಾ ನಾಯಕ್, ಹರಿಣಾಕ್ಷಿ, ಜಯ, ರಾಘವೇಂದ್ರ ತಿಮ್ಮಪ್ಪ ಪೂಜಾರಿ ತಕ್ಷಣವೇ ಕಾರಿನ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ.