
ವಿದ್ಯುತ್ ಲೈನ್ ಹಾಗೂ ಟವರ್ ನಿರ್ಮಾಣಕ್ಕೆ ಜಾಗಕ್ಕೆ ಅಕ್ರಮ ಪ್ರವೇಶ: ಹಿಮ್ಮೆಟ್ಟಿಸಿದ ಸ್ಥಳೀಯರು
ಮೂಲ್ಕಿ: ಉಡುಪಿಯ ಎಲ್ಲೂರುನಿಂದ ಕಾಸರಗೋಡಿಗೆ ೪೪೦ ಕಿಲೋ ವ್ಯಾಟ್ ವಿದ್ಯುತ್ ಸರಬರಾಜು ಟವರ್ ನಿರ್ಮಾಣಕ್ಕೆ ಕಳೆದ ಹಲವು ತಿಂಗಳಿನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬುಧವಾರ ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕಿನ್ನಿಗೋಳಿ ಏಳಿಂಜೆ ಕಂಗುರಿ ಪ್ರದೇಶಕ್ಕೆ ಬಂದ ಅಧಿಕಾರಿಗಳನ್ನು ಸ್ಥಳೀಯರು ಹಿಮ್ಮೆಟ್ಟಿಸಿದ್ದಾರೆ,
ಕಂಗುರಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ಮಂಗಳವಾರ ಮತ್ತು ಬುಧವಾರ ಗುಡ್ಡದಲ್ಲಿ ಮರಗಳನ್ನು ಸ್ಥಳೀಯ ಜಾಗದವರ ಅನುಮತಿ ಇಲ್ಲದೆ ಅಕ್ರಮವಾಗಿ ಕಡಿಯುತ್ತಿರುವ ಬಗ್ಗೆ ಈ ಘಟನೆ ಬುಧವಾರ ಸ್ಥಳೀಯರಿಗೆ ತಿಳಿದು ಬಂದಿದೆ ಕೂಡಲೇ ಸ್ಥಳೀಯರು ಐಕಳ ಪಂಚಾಯಿತಿಗೆ ದೂರು ನೀಡಿದ್ದು ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ
ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದರೂ ಯಾವುದೇ ಪರವಾನಿಗೆ ಅಥವಾ ದಾಖಲೆ ಇಲ್ಲದೆ, ಟವರ್ ನಿರ್ಣಕ್ಕೆ ಮುಂದಾಗುತ್ತಿರುವುದು ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದ್ದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ವಿದ್ಯುತ್ ಟವರ್ ಮತ್ತು ವಯರ್ ಖಾಸಗಿ ಜಮೀನಿನ ಮೇಲ್ಭಾಗದಲ್ಲಿ ಹಾದುಹೋಗುತ್ತಿದ್ದು ಸ್ಥಳೀಯರ ವಿರೋಧವಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಮತ್ತೂ ಟವರ್ ನಿರ್ಮಾಣಕ್ಕೆ ಮುಂದಾಗುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳ್ಳರಂತೆ ಬಂದ ಅಧಿಕಾರಿಗಳು ಅರಣ್ಯ ಇಲಾಖೆಯಿಂದ ಕೂಡ ಯಾವುದೇ ಪರವಾನಿಗೆ ಪಡೆದಿಲ್ಲ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೂಡ ಸೂಕ್ತ ಕ್ರಮ ವಹಿಸಬೇಕು, ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದ್ದು, ಈ ರೀತಿ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.ಸ್ಥಳಕ್ಕೆ ಮುಲ್ಕಿ ಪೊಲೀಸರು ಧಾವಿಸಿದ್ದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.