
ವಿದ್ಯುತ್ ಶಾಕ್‌ಗೆ ಪುಟಾಣಿ ಬಲಿ
Monday, December 30, 2024
ಪುತ್ತೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಪುಟಾಣಿಯೊಂದು ವಿದ್ಯುತ್ ಶಾಕ್‌ಗೆ ಬಲಿಯಾದ ದಾರುಣ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆಮುಡ್ನೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ಮುಡ್ನೂರು ಗ್ರಾಮದ ಗಾಳಿಮುಖದ ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಪುತ್ರ ಝನ್ ಎಂಬ ಮೂರೂವರೆ ವಯಸ್ಸಿನ ಪುಟಾಣಿ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟದೆ. ಮನೆಯ ಅರ್ಥ್‌ಗೆ ಸಂಬಂಧಿಸಿದ ತಂತಿಯೊಂದನ್ನು ಮಗು ಆಟವಾಡುತ್ತಿರುವಾಗ ಸ್ಪರ್ಶಿಸಿ ವಿದ್ಯುತ್ ಶಾಕ್‌ಗೆ ಒಳಗಾಗಿದೆ ಎಂದು ತಿಳಿದುಬಂದಿದೆ. ಮಗುವನ್ನು ರಕ್ಷಿಸಲು ಬಂದ ಮಗುವಿನ ಅಜ್ಜ ಶಾಫಿ ಎಂಬವರೂ ವಿದ್ಯುತ್ ಶಾಕ್‌ಗೆ ಒಳಗಾಗಿದ್ದು, ಅವರನ್ನು ಚೆರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.