ಮನೆಯ ಅಂಗಳಕ್ಕೆ ನುಗ್ಗಿದ ಆಂಬುಲೆನ್ಸ್
Monday, December 9, 2024
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸೊಂದು ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಡಿ. 9ರಂದು ಬೆಳಗ್ಗೆ 34 ನೆಕ್ಕಿಲಾಡಿಯಲ್ಲಿ ನಡೆದಿದೆ.
ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಆ?ಯಂಬುಲೆನ್ಸ್ ಇಲ್ಲಿನ ವನಸುಮ ನರ್ಸರಿ ರಸ್ತೆಯಲ್ಲಿ ನೇರ ಸಾಗಿ ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ ಮನೆಯ ಆವರಣಗೋಡೆಗೆ ಹಾನಿಯಾಗಿದ್ದು, ಆಂಬುಲೆನ್ಸ್ ಮನೆಯ ಗೋಡೆಗೆ ಢಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಸಂದರ್ಭ ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಕನ್ಯಾಡಿಯ ಸೇವಾ ಭಾರತಿಗೆ ಸೇರಿದ ಆಂಬುಲೆನ್ಸ್ ಇದಾಗಿದ್ದು, ಆರೋಗ್ಯ ಶಿಬಿರವೊಂದಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಿಂದ ಆಂಬುಲೆನ್ಸ್ ಚಾಲಕ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.