ಮರಳು ಅಕ್ರಮ ಸಾಗಾಟ
Thursday, December 19, 2024
ಉಳ್ಳಾಲ; ಅಕ್ರಮ ವಾಗಿ ಈಚರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಮರಳನ್ನು ಕರ್ತವ್ಯ ನಿರತ ಉಳ್ಳಾಲ ಪೊಲೀಸರು ವಶಪಡಿಸಿಕೊಂಡು ಚಾಲಕ ನನ್ನು ಬಂಧಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಬಂಧಿತನನ್ನು ಮೊಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ.
ಈತ ಕಲ್ಲಾಪು ವಿನಲ್ಲಿ ಯಾವುದೇ ದಾಖಲೆ ಇಲ್ಲದೆ ಮರಳು ತುಂಬಿಸಿ ಕೊಣಾಜೆ ಕಡೆ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.ಇದನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸರು ತೊಕ್ಕೊಟ್ಟು ವಿನಲ್ಲಿ ಲಾರಿ ನಿಲ್ಲಿಸಲು ಸೂಚಿಸಿದ್ದಾರೆ.ಚಾಲಕ ರಫೀಕ್ ಲಾರಿ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನನ್ನು ಬಂಧಿಸಿ ಲಾರಿ ಮತ್ತು ಎರಡು ಯೂನಿಟ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 255000 ಎಂದು ಅಂದಾಜಿಸಲಾಗಿದೆ.
ಈ ಬಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ