
ಹೆಲ್ಮೆಟ್ ಧರಿಸದವರಿಗೆ ಹೊಸ ಹೆಲ್ಮೆಟ್ ಖರೀದಿಯ ದಂಡ..!
ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುವ ಸವಾರರಿಗೆ 500 ರೂ. ದಂಡ ಇಲ್ಲವೆ ಹೊಸ ಹೆಲ್ಮೆಟ್ ಖರೀದಿಸಬೇಕು, ಸವಾರರಿಬ್ಬರೂ ಹೆಲ್ಮೆಟ್ ಧರಿಸಿ ಸಂಚರಿಸಿದ ಸವಾರರಿಗೆ ಗುಲಾಬಿ ಹೂವಿನಿಂದ ಗೌರವಾರ್ಪಣೆ ..
ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಗುರುವಾರ ಬಿ.ಸಿ.ರೋಡಿನ ವೃತ್ತ ಬಳಿ ಬಂಟ್ವಾಳ ಟ್ರಾಫಿಕ್ ಪೊಲೀಸದ ಹಾಗೂ ಆರ್.ಟಿ.ಒ. ಇಲಾಖೆಯ ಜಂಟಿಯಾಗಿ ನಡೆಸಿದ ಕಾರ್ಯಚರಣೆ. ಸಂಚಾರಿ ಪೋಲೀಸ್ ಠಾಣೆ ಹಾಗೂ ಆರ್.ಟಿ.ಒ.ಇಲಾಖೆ "ಹೆಲ್ಮೆಟ್ ಮೇಳ" ಎಂಬ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದು, ನೂರಕ್ಕೂ ಅಧಿಕ ದ್ವಿಚಕ್ರ ಸವಾರರು ಹೆಲ್ಮೆಟ್ ಸ್ಥಳದಲ್ಲೇ ಖರೀದಿ ಮಾಡಿದರೆ,ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಹಲವು ಸವಾರರಿಗೆ ದಂಡವನ್ನು ವಿಧಿಸಲಾಯಿತು.
ಹೆಲ್ಮೆಟ್ ಧರಿಸದೆ ಸಂಚರಿಸಿದ ಸುಮಾರು 60 ಸವಾರರಿಗೆ 500 ರೂ. ದಂಡ ವಿಧಿಸಲಾಗಿದ್ದರೆ. 200 ಕ್ಕೂ ಅಧಿಕ ಸವಾರರು ಹೆಲ್ಮೆಟ್ ಖರೀದಿಸಬೇಕಾಯಿತು.
ಹೆಲ್ಮೆಟ್ ಇಲ್ಲದೆ ಪ್ರತಿನಿತ್ಯ ಪ್ರಯಾಣಿಸುವ ಸವಾರರು ಹೊಸದಾಗಿ ಸ್ಥಳದಲ್ಲೆ ಹೆಲ್ಮೆಟ್ ಮಾರಾಟಗಾರನಿಂದ ಹೆಲ್ಮೆಟ್ ಪಡೆದುಕೊಂಡರೆ, ಇನ್ನುಳಿದ ಸವಾರರು ಹೆಲ್ಮೆಟ್ ಮನೆಯಲ್ಲೇ ಇಟ್ಟ ಬಂದ ಕಾರಣಕ್ಕಾಗಿ ದಂಡ ಕಟ್ಟಬೇಕಾಯಿತು.
ಹಾಗೆಯೇ ದ್ವಿಚಕ್ರ ವಾಹನಗಳಲ್ಲಿ ಸವಾರರಿಬ್ಬರೂ ಹೆಲ್ಮೆಟ್ ಧರಿಸಿ ಪ್ರಯಾಣಿಸುವವರಿಗೆ ಗುಲಾಬಿ ಹೂ ನೀಡಿ ಗೌರವಿಸಲಾಯಿತು.
900 ರೂ. ಬೆಲೆಯ ಐ.ಎಸ್.ಐ.ಮಾರ್ಕ್ ನ ಉತ್ತಮ ಗುಣಮಟ್ಟದ ಹೆಲ್ಮೆಟ್ ನ್ನು ಮಾರಾಟಗಾರನ ಜೊತೆ ಚೌಕಾಶಿ ನಡೆಸಿ 500 ರೂ.ಗೆ ಅಂದರೆ ದಂಡದ ಪ್ರಮಾಣದಷ್ಟು ದರದಲ್ಲಿ ನೀಡುವ ವ್ಯವಸ್ಥೆ ಪೊಲೀಸ್ ಅಧಿಕಾರಿಗಳು ಮಾಡಿಕೊಟ್ಟರು.
ಬೆಳ್ಳಂಬೆಳಗ್ಗೆ ಬಿ.ಸಿ.ರೋಡಿನ ಸರ್ಕಲ್ ಬಳಿಯಲ್ಲಿ ಯಾಕಪ್ಪಇಷ್ಟು ಮಂದಿ ಪೊಲೀಸರು ಜಮಾಯಿಸಿದ್ದಾರೆ ಎಂದು ಹಲವರು ಗಾಬರಿಗೊಂಡದ್ದು ಇದೆ.
ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಟ್ರಾಫಿಕ್ ಎಸ್.ಐ.ಸುತೇಶ್, ಟ್ರಾಫಿಕ್ 2 ಎಸ್.ಐ. ಸಂಜೀವ, ಎ.ಆರ್.ಟಿ.ಒ ಚರಣ್, ಬ್ರೇಕ್ ಇನ್ಸ್ ಪೆಕ್ಟರ್ ಪ್ರಮೋದ್ ಭಟ್ ಹಾಗೂ ಸಿಬ್ಬಂದಿಗಳಿದ್ದರು.