
ಮೂಡುಬಿದಿರೆ: ಎಂಜಿನಿಯರಿಂಗ್ ವಿದ್ಯಾಥಿ೯ನಿ ಆತ್ಮಹತ್ಯೆ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾಥಿ೯ನಿಯೋವ೯ಳು ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹೆತ್ತವರು ಸಂಶಯಾಸ್ಪದ ಸಾವು ಎಂದು ದೂರು ನೀಡಿದ್ದಾರೆ.
ಚಿತ್ರದುರ್ಗ ಮೂಲದ ಪ್ರಸ್ತುತ ಬೆಂಗಳೂರಿನ ದಾಸರಹಳ್ಳಿ ಭುವನೇಶ್ವರ ನಗರ ನಿವಾಸಿ ಬಸವರಾಜ್ ಎಂಬವರ ಪುತ್ರಿ ಡಿ.ಬಿ ಸೂಸನ್ನ (19) ಆತ್ಮಹತ್ಯೆ ಮಾಡಿಕೊಂಡಾಕೆ.
ಆಕೆ ವಾಸ್ತವ್ಯವಿದ್ದ ಫಲ್ಗುಣಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಹೆತ್ತವರಿಗೆ ತಿಳಿಸಿದಾಗ “ನಾವು ಬೆಂಗಳೂರಿನಿಂದ ಬರುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದು ಬೇಡ” ಎಂಬುದಾಗಿ ತಿಳಿಸಿದ ಮೇರೆಗೆ ಡಿ.ಬಿ ಸೂಸನ್ನಳಿದ್ದ ಕೊಠಡಿಗೆ ಬೀಗ ಹಾಕಲಾಗಿತ್ತು.
ಮೃತಳ ತಂದೆ ಬಸವರಾಜ್ ಅವರು ಶುಕ್ರವಾರ ಮೂಡುಬಿದಿರೆಗೆ ಬಂದು ನೋಡಿ ನಂತರ ಪೊಲೀಸ್ ಠಾಣೆಗೆ ಹೋಗಿ ತನ್ನ ಮಗಳ ಸಾವಿನ ಹಿಂದೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರ ಮೇಲೆ ಅನುಮಾನವಿರುವುದಾಗಿ ದೂರು ನೀಡಿದ್ದಾರೆ.
ಅದರಂತೆ ಮೂಡುಬಿದಿರೆ ಪೊಲೀಸ್ ಠಾಣಿಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ವೃತ್ಥ ನಿರೀಕ್ಷಕ ಸಂದೇಶ್ ಪಿ.ಜಿ. ತನಿಖೆ ಆರಂಭಿಸಿದ್ದಾರೆ.