
ಕೃಷಿ ಮಾಹಿತಿ ಕಾರ್ಯಾಗಾರ: ಗೇರು ಕೃಷಿಯನ್ನು ಎರಡನೇ ಬೆಳೆಯಾಗಿ ಗೇರು ಕೃಷಿ ಬೆಳೆಯಿರಿ: ಮಮತಾ ಗಟ್ಟಿ
ಬಂಟ್ವಾಳ: ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ, ದ.ಕ. ಸೌಹಾರ್ಧ ಸಹಕಾರಿ ಸಂಘ ಅಣ್ಣಳಿಕೆ, ರೋಟರಿ ಕ್ಲಬ್ ಲೊರೆಟ್ಟೊಹಿಲ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಅಡಿಕೆ ತೋಟದಲ್ಲಿ ಸಮಗ್ರ ಪೋಷಕಾಂಶ ಹಾಗೂ ಕೀಟರೋಗ ನಿಯಂತ್ರಣ ಮತ್ತು ಅಂತರ ಬೆಳೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಅಣ್ಣಳಿಕೆ ಶ್ರೀ ಮಹಾಗಣಪತಿ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರಕಾರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹಲಾವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆ ಕೃಷಿಕರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುತ್ತಿದ್ದು, ಕೃಷಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗೇರು ಕೃಷಿ ಉತ್ತಮ ಆದಾಯ ನೀಡುವ ಕೃಷಿಯಾಗಿದ್ದು, ಗೇರು ಬೀಜಕ್ಕೆ ಉತ್ತಮ ಬೇಡಿಕೆ ಇದೆ ಕೃಷಿಕರು ಗೇರು ಕೃಷಿಯನ್ನು ಎರಡನೇ ಬೆಳೆಯಾಗಿ ಬೆಳೆಯಬಹುದು ಎಂದ ಅವರು ನಿಗಮದ ಮೂಲಕ ಕೃಷಿಕರಿಗೆ ಉತ್ತಮ ತಳಿಯ ಗೇರು ಸಸಿಯನ್ನು ನೀಡುವುದಾಗಿ ತಿಳಿಸಿದರು.
ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ರೂಪಾ ಎಲ್. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಪ್ರಗತಿಪರ ಕೃಷಿಕ ದುರ್ಗಾದಾಸ್ ಶೆಟ್ಟಿ ಮಾವಂತೂರು, ದ.ಕ. ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ, ರೋಟರಿ ಕ್ಲಬ್ ಲೊರೆಟ್ಟೊಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ, ದಿಶಾ ಟ್ರಸ್ಟ್ ಕೈಕಂಬ ಇದರ ಸಂಯೋಜಕ ನಿಹಾಲ್, ಕೈಕಂಬ ರೈತ ಉತ್ಪಾದಕರ ಕಂಪೆನಿ ಗುರುಪುರ ಇದರ ಅಧ್ಯಕ್ಷ ನೋಬರ್ಟ್ ಸಿಕ್ವೆರಾ, ಗುರುಪುರ ಕೈಕಂಬ ನೇಸರ ಕೇಂದ್ರೀಯ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಬೆಳ್ಳಿಬೆಟ್ಟುಗುತ್ತು, ನೇತ್ರಾವತಿ ಒಕ್ಕೂಟ ಕಾರ್ಯದರ್ಶಿ ಮಂಜುಳಾ ಶೆಟ್ಟಿ, ಕಟ್ಟಡ ಮಾಲಕ ರಾಮಚಂದ್ರ ಶೆಟ್ಟಿಗಾರ್ ಮತ್ತಿತರರರು ಉಪಸ್ಥಿತರಿದ್ದರು.
ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ ಡಾ.ಭವಿಷ್ ಮತ್ತು ಬಂಟ್ವಾಳ ತೋಟಗಾರಿಕ ಇಲಾಖೆ ಹಿರಿಯ ನಿರ್ದೇಶಕ ಪ್ರದೀಪ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರಲ್ಲದೆ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ನೇತ್ರಾವತಿ ಒಕ್ಕೂಟ ಉಪಾಧ್ಯಕ್ಷ ದೇವಪ್ಪ ಕುಲಾಲ್ ಸ್ವಾಗತಿಸಿದರು. ಒಕ್ಕೂಟ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ ಪ್ರಸ್ತಾವಿಸಿದರು. ಸೌಹಾರ್ಧ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರದೇಶ್ ಕಾರ್ಯಕ್ರಮ ನಿರೂಪಿಸಿದರು.