
ರಾಜ್ಯ ಖೊಖೊ ತಂಡದ ಸಹಾಯಕ ಕೋಚ್ ಕಾರ್ತಿಕ್
Wednesday, January 29, 2025
ಪುತ್ತೂರು: ಉತ್ತರಾಖಂಡ್ ರಾಜ್ಯದಲ್ಲಿ ಜ.28ರಿಂದ ಫೆ.1 ತನಕ ನಡೆಯಲಿರುವ ಪುರುಷರ ಖೊಖೋ ರಾಷ್ಟ್ರೀಯ ಕ್ರೀಡಾಕೂಟದ ರಾಜ್ಯ ತಂಡಕ್ಕೆ ಪುತ್ತೂರಿನ ಕಾರ್ತಿಕ್ ಎನ್ ಸಹಾಯಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಖೊಖೋ ಕೋಚಿಂಗ್ ನಲ್ಲಿ ಎನ್‌ಐಎಸ್ ಅರ್ಹತೆ ಪಡೆದಿರುವ ಅವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಖೋಖೋ ಫೆಡರೇಶನ್ ಆಫ್ ಇಂಡಿಯಾ ದಿಂದ ರಾಷ್ಟ್ರೀಯ ಖೋಖೋ ತೀರ್ಪುಗಾರರಾಗಿ ಅರ್ಹತೆ ಪಡೆದಿದ್ದಾರೆ.
ಪುತ್ತೂರು ನೆಹರುನಗರದ ನಿವಾಸಿ ನಾರಾಯಣ-ವಿಜಯಾ ದಂಪತಿಗಳ ಪುತ್ರನಾದ ಕಾರ್ತಿಕ್ ಪುತ್ತೂರಿನ ವಿವೇಕಾನಂದ ಕಾಲೇಜು ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳಲ್ಲಿಯೂ ಖೋಖೋ ತರಬೇತಿ ನೀಡುತ್ತಿದ್ದಾರೆ. ಪುತ್ತೂರಿನ ಜಿಡೆಕಲ್ಲು ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದ ಅವರು ಆಳ್ವಾಸ್ ಕಾಲೇಜಿನಲ್ಲಿ ಬಿ.ಪಿಎಡ್ ಹಾಗೂ ಎಂ.ಪಿಎಡ್ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ಎನ್.ಐ ಎಸ್ ಡಿಪ್ಲೊಮಾ ಪಡೆದುಕೊಂಡಿದ್ದಾರೆ. ಅವರು ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ.