ಬಂಟ್ವಾಳ ತಾಲೂಕು ಮಟ್ಟದ ಕೋಟಿಚೆನ್ನಯ ಕ್ರೀಡೋತ್ಸವಕ್ಕೆ ಪೂಜಾರಿ ಚಾಲನೆ

ಬಂಟ್ವಾಳ ತಾಲೂಕು ಮಟ್ಟದ ಕೋಟಿಚೆನ್ನಯ ಕ್ರೀಡೋತ್ಸವಕ್ಕೆ ಪೂಜಾರಿ ಚಾಲನೆ


ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ತಾಲೂಕು ಕೋಟಿಚೆನ್ನಯ ಕ್ರೀಡೋತ್ಸವ ಸಮಿತಿ, ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಸಹಕಾರದೊಂದಿಗೆ ಭಾನುವಾರ ಬಂಟ್ವಾಳದ ಭಂಡಾರಿಬೆಟ್ಟುವಿನ ಎಸ್.ವಿ.ಎಸ್. ಕ್ರೀಡಾಂಗಣದಲ್ಲಿ ಬಿಲ್ಲವ ಸಮಾಜ ಬಾಂಧವರಿಗಾಗಿ ಆಯೋಜಿಸಲಾದ ಬಂಟ್ವಾಳ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ, ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಿದರು.

ಈ ಸಂದರ್ಭ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದ ಅವರು, ಕ್ರೀಡೋತ್ಸವದಿಂದ ಪ್ರತಿಭೆಗಳು ಅರಳಲಿ ಎಂದು ಶುಭ ಹಾರೈಸಿದರು.


ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮಾನವತ್ವದೊಂದಿಗೆ ಜಾತಿ, ಮತವನ್ನು ಮೀರಿ ಕ್ರೀಡಾಸ್ಫೂರ್ತಿಯನ್ನು ಮೆರೆಯುವುದು ಇಂದಿನ ಅಗತ್ಯ ಎಂದರು. 

ಕ್ರೀಡಾಜ್ಯೋತಿಯನ್ನು ಪಡುಮಲೆ ಕೋಟಿಚೆನ್ನಯ ಜನ್ಮಸ್ಥಾನ ಸಂಚಲನಾ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹಸ್ತಾಂತರಿಸಿದರು. ಬಂಟ್ವಾಳ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ನೆರವೇರಿಸಿ, ಧ್ವಜಾರೋಹಣಗೈದರು.

ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಭಾರತ್ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಬಿಲ್ಲವರ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ವೇದಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಮಾಜಿ ಶಾಸಕ ಎ. ರುಕ್ಷ್ಮಯ ಪೂಜಾರಿ, ಬಂಟ್ವಾಳ ಪುರಸಭಾಧ್ಯಕ್ಷ ಬಿ. ವಾಸು ಪೂಜಾರಿ ಲೊರೆಟ್ಟೋ, ಬೆಂಗಳೂರಿನ ಪೊಲೀಸ್ ಅಧಿಕಾರಿ ಶಾಂತಾರಾಮ ಕುಂದರ್, ಉಡುಪಿ ಜಿಲ್ಲೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಉದ್ಯಮಿ ಸುನಿತ್ ಕಿಶನ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಮಂಗಳೂರು ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಎಕ್ಸೆಸ್ ಗಾಯತ್ರಿ ಎಂ. ಶಿವಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷೆ ವಿದ್ಯಾ ರಾಕೇಶ್, ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲ್, ಹಿರಿಯ ನ್ಯಾಯವಾದಿ ಟಿ.ನಾರಾಯಣ ಪೂಜಾರಿ, ಪ್ರಮುಖರಾದ ಶೇಖರ್ ಪೂಜಾರಿ, ರತ್ನಾಕರ ಕರ್ಕೇರ, ಎ.ಕೆ. ವಸಂತ್, ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ ಪೂಜಾರಿ, ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜತೆ ಕಾರ್ಯದರ್ಶಿ ರಾಜೇಶ್ ಸುವರ್ಣ ಮಿತ್ತಬೈಲ್, ಕ್ರೀಡೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಉದ್ಯಮಿ ಸಂಜೀವ ಪೂಜಾರಿ ಬಿರ್ವ ಉಪಸ್ಥಿತರಿದ್ದರು. 

ಸಂಚಾಲಕ ಬೇಬಿ ಕುಂದರ್ ಸ್ವಾಗತಿಸಿ, ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.


ಕ್ರೀಡೋತ್ಸವಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ:

ಕ್ರೀಡೋತ್ಸವಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಮಾತನಾಡಿ, ಕೋಟಿಚೆನ್ನಯ ಕ್ರೀಡೋತ್ಸವ ನಡೆಯುತ್ತಿರುವುದು ಸಮಾಜಕ್ಕೆ ಹೆಮ್ಮೆ. ಕೋಟಿ ಚೆನ್ನಯರು ಯುವ ಸಮಾಜಕ್ಕೆ ಸ್ಪೂರ್ತಿ, ಶಕ್ತಿಯಾಗಿದ್ದಾರೆ. ಸ್ವಾಭಿಮಾನಿಗಳಾಗಿ ಇತಿಹಾಸ ಪುರುಷರಾದ ಕೋಟಿ ಚೆನ್ನಯರು ಬಾಲ್ಯದಲ್ಲಿ ಮಾಡಿದ ಪ್ರತಿಜ್ಞೆಯನ್ನು ಯೌವನದಲ್ಲಿ ಪೂರೈಸಿದ ವೀರರಾಗಿದ್ದರು. ಕ್ರೀಡೋತ್ಸವ ಕ್ರೀಡಾ ತರಬೇತಿ ಕೇಂದ್ರವಾಗಿ ಕೋಟಿಚೆನ್ನಯರ ಹೆಸರು ಶಾಶ್ವತವಾಗಿ ಉಳಿಯಲಿ ಸಂಘಟನೆಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬೇಬಿ ಕುಂದರ್, ಹರಿಕೃಷ್ಣ ಬಂಟ್ವಾಳ, ಪ್ರಕಾಶ ಅಂಚನ್, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article