ಲಾರಿಯೊಳಗೆ ಯುವಕನ ಶವ

ಲಾರಿಯೊಳಗೆ ಯುವಕನ ಶವ

ಕಾಸರಗೋಡು: ನಿಲುಗಡೆಗೊಳಿಸಿದ್ದ ಟಿಪ್ಪರ್ ಲಾರಿಯೊಳಗೆ ಯುವಕನೊಬ್ಬ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪೈವಳಿಕೆ ಬಳಿಯ ಕಾಯರ್ ಕಟ್ಟೆ ಯಲ್ಲಿ ನಡೆದಿದೆ. ಪೈವಳಿಕೆ ಬಾ ಪದವಿನ ಮುಹಮ್ಮದ್ ಆಶೀಫ್ (29) ಮೃತಪಟ್ಟವರು. 

ಇಂದು ಮುಂಜಾನೆ ಮೂರು ವರೆ ಸುಮಾರಿಗೆ ಶರೀಫ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣಾ ಪೊಲೀಸರು ಬಂದ್ಯೋಡಿ ನ ಆಸ್ಪತ್ರೆಗೆ ತಲಪಿಸಿದ್ದರೂ ಆಗಲೇ ಮೃತಪಟ್ಟಿದ್ದರು.ಫೋನ್ ಕರೆಯೊಂದು ಬಂದ ಹಿನ್ನಲೆಯಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಆಶಿಫ್ ಮನೆಯಿಂದ ತೆರಳಿದ್ದರು.

ಮುಹಮ್ಮದ್ ಆಸಿಪ್ ಮನೆಯಿಂದ ಟಿಪ್ಪರ್ ನಲ್ಲಿ ಹೊರಟಿದ್ದರು ಆದರೆ ಬಹಳ ಹೊತ್ತಾದರೂ ಆಸೀಪ್ ತಲುಪದ ಹಿನ್ನೆಲೆಯಲ್ಲಿ ಗೆಳೆಯ ಹುಡುಕಾಡಿದಾಗ ಆಸೀಫ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದನೆನ್ನಲಾಗಿದೆ. ಟಿಪ್ಪರ್ ಲಾರಿಯೊಳಗೆ ರಕ್ತದ ಕಲೆಗಳು ಕಂಡು ಬಂದಿದ್ದು, ಆಸೀಫ್ ನ ಚಪ್ಪಲಿ ಟಿಪ್ಪರ್ ಹೊರಕ್ಕೆ ಬಿದ್ದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಸಾವಿನ ಬಗ್ಗೆ ಹಲವು ಸಂಶಯಗಳು ಉಂಟಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article