
ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು
Sunday, January 5, 2025
ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ವಂಚಿಸಿದ ಪ್ರಕರಣದ ಆರೋಪಿ ಮಾಜಿ ಡಿವೈಎಫ್‌ಐ ಮುಖಂಡೆ, ಅಧ್ಯಾಪಕಿಯಾಗಿರುವ ಪುತ್ತಿಗೆ ಬಾಡೂರಿನ ಸಚಿತಾ ರೈ ವಿರುದ್ಧ ಮಂಜೇಶ್ವರ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಸಚಿತಾ ರೈ ವಿರುದ್ಧ ದಾಖಲಿಸಿದ ಕೇಸುಗಳ ಸಂಖ್ಯೆ 20 ಕ್ಕೇರಿದೆ.
ಬಾಯಾರು ಧರ್ಮತ್ತಡ್ಕ ಕರುವಾಜೆಯ ಮರಿಯಮ್ಮತ್ ಸಪೂರ ನೀಡಿದ ದೂರಿನಂತೆ ಸಚಿತಾ ರೈ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಸರಗೋಡು ಕೇಂದ್ರೀಯ ವಿದ್ಯಾಲಯದಲ್ಲಿ ಸೀನಿಯರ್ ಕ್ಲಾರ್ಕ್ ಉದ್ಯೋಗ ಭರವಸೆ ನೀಡಿ 13,80,000 ರೂ. ವಂಚಿಸಿದ್ದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. 2023 ಡಿ.13 ರಿಂದ 2024 ಎಪ್ರಿಲ್ 30 ರ ವರೆಗಿನ ಕಾಲಾವಧಿಯಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.