ಕಾಡು ಪ್ರಾಣಿ ಬೇಟೆಗೆ ಸಂಚು ಮೂವರ ಬಂಧನ

ಕಾಡು ಪ್ರಾಣಿ ಬೇಟೆಗೆ ಸಂಚು ಮೂವರ ಬಂಧನ


ಕುಂದಾಪುರ: ಕಳೆದ ಗುರುವಾರ ರಾತ್ರಿ ಕಾಡು ಪ್ರಾಣಿ ಹತ್ಯೆಯ ದುರುದ್ದೇಶದಿಂದ ಅರಣ್ಯ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ಬ್ರಹ್ಮಾವರ ತಾಲೂಕು ವಂಡಾರು ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. 

ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ (23) ಮುಂಡಳ್ಳಿ ಭಟ್ಕಳ,  ವಾಸೀಂ ಅಕ್ರಂ (34) ಶಿರೂರು ಗ್ರಾಮ,  ಮತ್ತು ಅಲಿ ಬಾಪು ಯಾಸಿನ್ (36)  ಶಿರೂರು ಗ್ರಾಮ ಎಂಬ ಮೂವರೇ ಬಂಧನಕ್ಕೊಳಗಾದವರು. 

ಇವರಿಂದ ಒಂದು ಬಂದೂಕು, 11ಕಾಡತೂಸು, 4 ಹರಿತವಾದ ಚಾಕುಗಳು,  ಮಾಂಸ ಮಾಡಲು ಉಪಯೋಗಿಸುವ ಒಂದು ಮಚ್ಚು, ಒಂದು ಟಾರ್ಚ್, ಮೂರು ಮೊಬೈಲ್ ಫೋನ್ ಹಾಗೂ ಆರೋಪಿಗಳು ಬಳಸಿದ್ದ ಒಂದು ಆಟೋ ರಿಕ್ಷಾ ವನ್ನು ವಶಕ್ಕೆ ಪಡೆಯಲಾಗಿದೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ. ದಿನೇಶ್, ಪ್ರಕಾಶ್ ಪೂಜಾರಿ ವಲಯ ಅರಣ್ಯಾಧಿಕಾರಿಗಳಾದ ಜ್ಯೋತಿ, ಸಂದೇಶ್ ಕುಮಾರ್, ಗಣಪತಿ ವಿ. ನಾಯ್ಕ್ ಹಾಗೂ ಶಂಕರನಾರಾಯಣ ವಲಯ ಸಿದ್ದಾಪುರ ವನ್ಯಜೀವಿ ವಲಯ, ಆಗುಂಬೆ ವನ್ಯಜೀವಿ ವಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article