
ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ-ಕುಂದಾಪುರ ವತಿಯಿಂದ ಅಂಗನವಾಡಿಗೆ ಟಿ.ವಿ. ಹಾಗೂ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಮತ್ತು ವಿದ್ಯಾರಂಗ ಮಿತ್ರ ಮಂಡಳಿಗೆ ಧನ ಸಹಾಯ ಕೊಡುಗೆ
Wednesday, January 8, 2025
ಕುಂದಾಪುರ: ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ, ಕುಂದಾಪುರ ಇವರ ವತಿಯಿಂದ ಶ್ರೀ ಮಹಾಕಾಳಿ ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಮಕ್ಕಳಿಗೆ ಮ್ಯಾಜಿಕ್ ಸ್ಲೇಟ್, ಕ್ರೇಯಾನ್ಸ್, ಡ್ರಾಯಿಂಗ್ ಬುಕ್ ಹಸ್ತಾಂತರಿಸುವ ಕಾರ್ಯಕ್ರಮವನ್ನು ಇತ್ತಿಚೆಗೆ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷ ಯೋಗೇಶ್ ಖಾರ್ವಿ ವಹಿಸಿದ್ದರು. ಉದ್ಘಾಟಕರಾಗಿ ಶ್ರೀಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಅಜಂತ್ ಖಾರ್ವಿ, ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನಾಧಿಕಾರಿ ಉಮೇಶ್ ಟಿ, ಮೇಲ್ವಿಚಾರಕಿ ಲಲಿತಾ, ಪುರಸಭೆ ಸದಸ್ಯ ಎಚ್.ಎನ್. ಚಂದ್ರಶೇಖರ್ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಐಶ್ವರ್ಯ ಮತ್ತು ಅಂಗನವಾಡಿಯ ಕಾರ್ಯಕರ್ತೆ ಪ್ರೇಮ, ಅಂಗನವಾಡಿ ಸಹಾಯಕಿ ಯಮುನಾ ಹಾಗೂ ಫ್ರೆಂಡ್ಸ್ ಗ್ರೂಫಿನ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಹಾಗೆಯೇ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ 50,000 ರೂ. ದೇಣಿಗೆ, ವಿದ್ಯಾರಂಗ ಮಿತ್ರ ಮಂಡಳಿ(ರಿ) ಇವರಿಗೆ 15,000 ರೂ. ದೇಣಿಗೆ, ಮತ್ತು ಆರೋಗ್ಯ ಪೀಡಿತ ಮಹಿಳೆಗೆ 10,000 ರೂ. ಹಣವನ್ನು ಹಸ್ತಾಂತರಿಸಿದರು.
2019ರಲ್ಲಿಯೂ ಕೂಡ ಸುಮಾರು 5 ಲಕ್ಷಕ್ಕೂ ಮೀರಿ ಹಣವನ್ನು ಸಾರ್ವಜನಿಕ ವಲಯದಲ್ಲಿ ಈ ಫ್ರೆಂಡ್ಸ್ ಗ್ರೂಪ್ ಸಹಾಯ ಮಾಡಿದೆ.