
12ನೇ ಶತಮಾನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಶ್ರೇಷ್ಠವಾದ ಯುಗ: ಡಾ. ಶಿವರಾತ್ರಿ ದೇಶೀಕ್ಷೇತ್ರ ಮಹಾಸ್ವಾಮಿಗಳು
ಮಂಗಳುರು: 12ನೇ ಶತಮಾನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಶ್ರೇಷ್ಠವಾದ ಯುಗ. ವಚನ ಸಾಹಿತ್ಯ ಸಮಾಜಕ್ಕೆ ಬರುವ ತನಕ ಕೇವಲ ಸಂಸ್ಕೃತದಲ್ಲಿ ಮಾತ್ರ ಸಾಹಿತ್ಯವನ್ನು ಹೊರತರಬಹುದು ಎಂದು ನಂಬಿದ್ದ ಜನತೆಗೆ ವಚನ ಸಾಹಿತ್ಯ ಸಾಮಾನ್ಯರೂ ಸಾಹಿತ್ಯವನ್ನು ರಚಿಸಬಹುದು ಎಂದು ತೋರಿಸಿಕೊಟ್ಟಿತು ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಜಗದ್ಗುರು ಡಾ. ಶಿವರಾತ್ರಿ ದೇಶೀಕ್ಷೇತ್ರ ಮಹಾಸ್ವಾಮಿಗಳು ನುಡಿದರು.
ಅವರು ಇಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ(ರಿ)ದ ವತಿಯಿಂದ ರಾಜ್ಯಮಟ್ಟದ ಚವನ ಸಾಹಿತ್ಯ ಸಮ್ಮೇಳನ-2025ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಚನಕಾರರು ಮಾತಿನ ಮೂಲಕ ದೇವರನ್ನು ಕಾಣುವುದನ್ನು ತಿಳಿಸಿಕೊಟ್ಟಿದ್ದಾರೆ. ಯಾರ ವ್ಯಾಖ್ಯಾನವೂ ಇಲ್ಲದೇ ಸುಲಭವಾಗಿ ಜನರಿಗೆ ತಿಳಿಸಿಕೊಟ್ಟದ್ದು, ವಚನ ಸಾಹಿತ್ಯ. ವಚನದಲ್ಲಿ ಆಚರಣೆ, ನಂಬಿಕೆ, ಅರ್ಪಣೆ ಮಾತ್ರ ಬೇಕಾಗುತ್ತದೆ. ಜಂಗಮರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಲ್ಲಿ ಇಡೀ ಜಗತ್ತೇ ಸಂತೃಪ್ತಿಯಾಗಿರುತ್ತದೆ. ವಚನ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದು, ಸಮಾಜಿಕ ಸಮಾನತೆಯನ್ನು ಸಾರುವಂತಹದ್ದು, ವಚನ ಸಾಹಿತ್ಯ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಡಾ. ಅರವಿಂದ್ ಜತ್ತಿ ಮತನಾಡಿ, ಇಂದು ನಡೆಯುತ್ತಿರುವ ಸಮ್ಮೇಳನದ ಮೂಲಕ ಸಮ್ಮಿಲನ ನಡೆಯುತ್ತಿದೆ. ವಚನಕಾರರು ಬದುಕಿನ ಧರ್ಮವನ್ನು ಜನಸಮಾನ್ಯರು ಮುಟ್ಟುವ ಸಾಮಾನ್ಯ ಭಾಷೆಯಲ್ಲಿ ನೀಡಿದರು. ವಚನ ಸಾಹಿತ್ಯವು ಸ್ವಾ ಅನುಭವವನ್ನು ಬರೆದಿರುವುದು. 2000 ಇತಿಹಾಸವಿರುವ ಕನ್ನಡಕ್ಕೆ ವಚನ ಸಾಹಿತ್ಯ ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬರೆಯುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ವಚನ ಸಾಹಿತ್ಯ ವಿಶ್ವ ಬ್ರಾತೃತ್ವವನ್ನು ಬಿತ್ತುವ ಕೆಲಸ ಆಗಬೇಕು. ಲಿಂಗವನ್ನು ಕೇಲವ ಒಂದು ಜಾತಿಗೆ ಸೀಮಿತವಾಗಿಸಬಾರದು. ವಿಶ್ವ ಮಾನವರಾದವರನ್ನು ಜಾತಿ, ಧರ್ಮ ಎಲ್ಲವನ್ನೂ ಮೀರಿ ಅವರ ತತ್ವಗಳನ್ನು ಮೈಗೋಡಿಸಿಕೊಳ್ಳಬೇಕು. ಸಿದ್ದ ಆಚರಣೆಗಳ ಮಾದರಿಯ ಹೊರಗೆ ನೋಡುವುದೇ ವಚನ ಧರ್ಮ. ವಚನ ಸಾಹಿತ್ಯದಲ್ಲಿ ಅನುಭವ ಮಂದಿರ ನಿರ್ಮಾಣವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಹರಿಕೃಷ್ಣ ಪುನರೂರು, ಡಾ. ಶಾಲಿನಿ ನಾಲ್ವಾಡ್, ಗುರುಕಿರಣ್, ರಾಜೇಶ್ವರಿ ಹಿರೇಮಠ್, ದೇವದಾಸ್ ಕಾಪಿಕಾಡ್, ಯೋಗೀಶ್, ಶಶಿಕುಮಾರ್ ಭಟ್, ಮಹಮದ್ ಹ್ಯಾಶೀರ್, ಸುರರ್ಶನ್ ಎಂಆರ್ಪಿಎಲ್, ಜನಾರ್ಧನ ಬುಡೋಳಿ, ಕೆ. ಯುವರಾಜ್ ಅವರುಗಳಿಗೆ ‘ಕಾಯಕ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ನುಡಿಗಳನ್ನಾಡಿದರು.
ಗುರುಪುರ ಮಠದ ಶ್ರೀ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮಿಜಿ, ಶಾಸಕ ವೇದವ್ಯಾಸ ಕಾಮತ್, ಶ್ರೀ ಕ್ಷೇತ್ರ ಕಟೀಲಿ ಹರಿನಾರಾಯಣದಾಸ ಆಸ್ರಣ್ಣ, ಮಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಅಕ್ಕಮಹಾದೇವಿ ವೀರಶೈವ ಮಹಾಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ, ಬ್ಯಾಂಕ್ ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ, ಹರಿಕೃಷ್ಣ ಪುನರೂರು, ಗುರುಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಸುರೇಂದ್ರ ರಾವ್ ಸ್ವಾಗತಿಸಿದರು. ಶಿವಪ್ರಸಾದ್ ನಿರೂಪಿಸಿದರು.