
ಜ.21ರಂದು ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ ಅಂಗವಾಗಿ ಜ.21ರಂದು ಬೆಳಗ್ಗೆ 9ರಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೀದಿಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಮಾವೇಶವನ್ನು ನಿವೃತ್ತ ಪ್ರಾಧ್ಯಾಪಿಕೆ ಡಾ.ರೀಟಾ ನರೋನ್ಹಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತಿತರರು ಭಾಗವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಬೀದಿಬದಿ ವ್ಯಾಪಾರಿಗಳ ಪರವಾಗಿ ಕೆಲಸಮಾಡುತ್ತಿರುವ ಅಧಿಕೃತ ಸಂಘಟನೆಯಾಗಿದೆ. ಆದರೆ ಸಂಘದಿಂದ ವಜಾ ಮಾಡಲಾದ ಬಿ.ಕೆ.ಇಮ್ತಿಯಾಜ್ ಎಂಬ ವ್ಯಕ್ತಿ ಈಗಲೂ ಬೀದಿಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸುತ್ತೇವೆ ಎಂದು ಸುಳ್ಳು ಹೇಳಿ ವ್ಯಾಪಾರಿಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಸಂಘಟನೆ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದ್ದು, ಯಾವ ಬೀದಿಬದಿ ವ್ಯಾಪಾರಿಯೂ ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷ ಮಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಮಹಮ್ಮದ್ ಆಸಿಫ್ ಬಾವ, ಸಮಿತಿ ಸದಸ್ಯ ಪ್ರವೀಣ್ ಕುಮಾರ್, ಸಹಕಾರ ಸಂಘದ ನಿರ್ದೇಶಕಾರ ಅಬ್ದುಲ್ ರಹಿಮಾನ, ರೂಪ್ಲಾ ನಾಯಕ್, ಕಾವೂರು ಘಟಕದ ಪ್ರ.ಕಾರ್ಯದಶಿರ ಅಸ್ಲಾಂ ಉಪಸ್ಥಿತರಿದ್ದರು.