
ಗೋ ಹತ್ಯೆ: ಹೋರಾಟಕ್ಕೆ ಬಿ.ಜೆ.ಪಿ. ಬೆಂಬಲ
Saturday, January 18, 2025
ಮಂಗಳೂರು: ರಾಜ್ಯದಲ್ಲಿ ಮತಾಂಧ ದುರುಳರು ಗೋ ಹತ್ಯೆ, ದೌರ್ಜನ್ಯ ಎಸಗುತ್ತಿರುವ ಮತ್ತು ಸರ್ಕಾರ ಕ್ರಮ ಜರುಗಿಸಲು ತೋರುತ್ತಿರುವ ನಿರಾಸಕ್ತಿಯ ವಿರುದ್ಧ ದಕ್ಷಿಣ ಕನ್ನಡ ಗೋ ಸಂರಕ್ಷಣಾ ಸಮಿತಿಯ ವತಿಯಿಂದ ಹೋರಾಟ ನಡೆಯಲಿದೆ.
ಜ.20 ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಎ.ಸಿ.ಕಚೇರಿ ಮುಂಭಾಗ ಮತ್ತು ಜ. 21ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮಿನಿ ವಿಧಾನ ಸೌಧ ಎದುರುಗಡೆ ಗೋ ಸಂರಕ್ಷಣೆಗಾಗಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಈ ಪ್ರತಿಭಟನೆಗೆ ಬಿ.ಜೆ.ಪಿ.ಗೆ ಸಂಪೂರ್ಣ ಬೆಂಬಲ ಘೋಷಿಸಿದೆ. ಪಕ್ಷದ ಕಾರ್ಯಕರ್ತರು ಗೋ ಸಂತತಿ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಭಾಗಿಯಾಗ ಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.