ಜ.23 ರಿಂದ 26 ರವರೆಗೆ ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ

ಜ.23 ರಿಂದ 26 ರವರೆಗೆ ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ


ಮಂಗಳೂರು: ಯೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜ.23 ರಿಂದ 26 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ದ.ಕ. ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಹೇಳಿದರು.

ಅವರು ಇಂದು ನಗರದ ಕದ್ರಿ ಉದ್ಯಾನವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಜ.23 ರಂದು ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭ ಸದಸ್ಯರು, ರಾಜ್ಯ ಸಭಾ ಸಂಸದರು, ವಿಧಾನಸಭಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಪ್ರದರ್ಶನದಲ್ಲಿ 100 ಅಂಗಡಿಗಳಿಗೆ ಔಷಧಿ ಗಿಡಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೇನು ಕೃಷಿಗೆ ಹೆಚ್ಚಿ ಬೇಡಿಕೆ ಇದ್ದು, ಪ್ರತ್ಯೇಕ ಅಂಗಡಿಯನ್ನು ಹಾಕಿ ಅದರಿಂದ ರೈತರಿಗೆ ಮಾಹಿತಿ ನೀಡಲಾಗುವುದು. ತೋಟಗಾರಿಕೆ ಇಲಾಖೆಯಿಂದ ಜಿಲ್ಲಾ ಇಲಾಖೆ, ರಾಜ್ಯ ಇಲಾಖೆ ಹಾಗೂ ಕೇಂದ್ರ ಇಲಾಖೆಗಳಲ್ಲಿ ಕೃಷಿಗೆ ಅನುಷ್ಠಾನಗೊಂಡಿರುವ ಮಾಹಿತಿಯನ್ನು ರೈತರಿಗೆ ನೀಡಲಾಗುವುದು, ಕರಾವಳಿಯ ಜನರು ಗೆಡ್ಡೆ-ಗೆಣಸನ್ನು ಹೆಚ್ಚಾಗಿ ಉಪಯೋಗಿಸುವುದರಿಂದಾಗಿ 50 ತರಹದ ಗೆಡ್ಡೆ-ಗೆಣಸುಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದರೊಂದಿಗೆ ದೇಶದ ತರಕಾರಿ ಬೀಜಗಳನ್ನು ಕೂಡ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಮಂಜುನಾಥ್, ಪ್ರಮೋದ್, ಬಿ. ಜಗನ್ನಾಥ ಗಂಬೀರ್, ಜಿ.ಕೆ. ಭಟ್ ಮತ್ತಿತರರು ಇದ್ದರು.

1 ರೂ.ಗೆ 1.5 ಲಕ್ಷ ಗಿಡ ಮಾರಾಟ:

ಈಗಾಗಲೇ ಇಲ್ಲಿ 5 ಜಾತಿಯ 1.5 ಲಕ್ಷ ಗಿಡಗಳನ್ನು ಬೆಳೆಸಲಾಗಿದ್ದು, ಅವುಗಳನ್ನು 1 ರೂ.ಗೆ ನೀಡಲಾಗುವುದು. ಇದರಲ್ಲಿ ಬದನೆ, ಮೆಣಸು, ಹಲಸಂಡೆ, ಸೋರೆಕಾಯಿ ಹಗೂ ಟೊಮೋಟೊ ಗಿಡವನ್ನು ವಿತರಿಸಲಾಗುವುದು ಎಂದರು.

ವಯಸ್ಕರಿಗೆ 30-ಮಕ್ಕಳಿಗೆ 20 ರೂ.:

ವಯಸ್ಕರಿಗೆ 30 ರೂ ಹಾಗೂ ಮಕ್ಕಳಿಗೆ 20 ರೂ. ಪ್ರವೇಶ ಧರವನ್ನು ನಿಗದಿಪಡಿಸಿದ್ದು, ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಶಾಲಾ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿ ಬಂದವರಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಹೇಳಿಒದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article