ಮಂಗಳೂರು ವಿವಿ: ಜ.29 ರಿಂದ 35ನೇ ಐಎಆರ್‌ಪಿ ರಾಷ್ಟ್ರೀಯ ಸಮ್ಮೇಳನ

ಮಂಗಳೂರು ವಿವಿ: ಜ.29 ರಿಂದ 35ನೇ ಐಎಆರ್‌ಪಿ ರಾಷ್ಟ್ರೀಯ ಸಮ್ಮೇಳನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಇಂಡಿಯನ್ ಅಸೋಸಿಯೇಷನ್ ಫಾರ್ ರೇಡಿಯೇಶನ್ ಪ್ರೊಟೆಕ್ಷನ್ (ಐಎಆರ್ಪಿ) ಸಹಯೋಗದೊಂದಿಗೆ ‘ಸುಸ್ಥಿರ ಪರಮಾಣು ಶಕ್ತಿಗಾಗಿ ವಿಕಿರಣ ರಕ್ಷಣೆಃ ಹವಾಮಾನ ಮತ್ತು ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವುದು’ ಎಂಬ ವಿಷಯದ ಕುರಿತು 35 ನೇ ಐಎಆರ್‌ಪಿ ರಾಷ್ಟ್ರೀಯ ಸಮ್ಮೇಳನವನ್ನು ಜನವರಿ 29 ರಿಂದ 31 ರವರೆಗೆ ವಿಶ್ವವಿದ್ಯಾಲಯದ ಮಂಗಳ ಆಡಿಟೋರಿಯಂನಲ್ಲಿ ಆಯೋಜಿಸಲಿದೆ.

ಜನವರಿ 29ರಂದು ಬೆಳಗ್ಗೆ 9.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಅಣುಶಕ್ತಿ ನಿಯಂತ್ರಣ ಮಂಡಳಿ (ಎಇಆರ್ಬಿ) ಅಧ್ಯಕ್ಷ ಡಿ.ಕೆ. ಶುಕ್ಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಕೆ. ಸಿದ್ದಪ್ಪ, ಯೆನೆಪೋಯ (ಡೀಮ್ಡ್ ವಿಶ್ವವಿದ್ಯಾಲಯ) ಉಪಕುಲಪತಿ ಪ್ರೊ. ಎಂ.ವಿಜಯ ಕುಮಾರ್, ಕೈಗಾ ಜನರೇಟಿಂಗ್ ಸ್ಟೇಷನ್ (ಕೈಗಾ) ನಿರ್ದೇಶಕ ಬಿ. ವಿನೋದ್ ಕುಮಾರ್, ಆರೋಗ್ಯ, ಸುರಕ್ಷತೆ ಮತ್ತು ಪರಿಸರ ಸಮೂಹ (ಬಾರ್ಕ್) ನಿರ್ದೇಶಕ ಡಾ. ಡಿ.ಕೆ. ಆಸ್ವಾಲ್ ಗೌರವ ಅತಿಥಿಗಳಾಗಿರಲಿದ್ದಾರೆ. 

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಕೆ. ರಾಜು ಮೊಗವೀರ (ಕೆ.ಎ.ಎಸ್) ಮತ್ತು ಇತರರು ಭಾಗವಹಿಸಲಿದ್ದಾರೆ. ಸ್ಮರಣಿಕೆ ಮತ್ತು ಇ-ಅಬ್ಸ್ಟ್ರಾಕ್ಟ್ ಪುಸ್ತಕ ಲೋಕಾರ್ಪಣೆ, ವ್ಯಾಪಾರ ಪ್ರದರ್ಶನ ಮತ್ತು ಐಎಆರ್ಪಿ ಪ್ರಶಸ್ತಿಗಳ ಘೋಷಣೆಗಳು ಕಾರ್ಯಕ್ರಮದ ಭಾಗವಾಗಿರಲಿವೆ ಎಂದು ಮೂಲಗಳು ತಿಳಿಸಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article