ಜ.4, 5 ರಂದು ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ

ಜ.4, 5 ರಂದು ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಜ.4 ಮತ್ತು 5ರಂದು ಮಂಗಳೂರಿನ ಸಂಘನಿಕೇತನದಲ್ಲಿ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ ಆಯೋಜಿಸಲಾಗಿದೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಥಿಯಲ್ಲಿ ಮಾತನಾಡಿದ ಸಾವಯವ ಬಳಗದ ಕಾರ್ಯಾಧ್ಯಕ್ಷ ಜಿ.ಆರ್. ಪ್ರಸಾದ್, ಮೇಳದಲ್ಲಿ 350ಕ್ಕೂ ವಿಧದ ಗಡ್ಡೆ ಕೆಣಸು ಹಾಗೂ 150ಕ್ಕೂ ವಿಧದ ಸೊಪ್ಪಗಳು ಪ್ರದರ್ಶನಗೊಳ್ಳಲಿವೆ.  ಬೆಳಗ್ಗೆ 9ರಿಂದ ಸಂಜೆ 7ರವೆಗೆ ನಡೆಯುವ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲದೆ, ಮಹಾರಾಷ್ಟ್ರ, ಒಡಿಶಾ, ಆಂಧ್ರ ಪ್ರದೇಶ, ಕೇರ ರಾಜ್ಯಗಳ ರೈತರು ತಾವು ಬೆಳೆಸಿದ ಶುಂಠಿ, ಕೂವೆ ಗೆಡ್ಡೆ, ಉತ್ತರಿ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣ,ಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸಿನ ಬೀಜದ ಗೆಡ್ಡೆ ಗೆಣಸನ್ನು ಮಾರಾಟಕ್ಕೆ ತರಲಿದ್ದಾರೆ. ಈ ಎರಡೂ ದಿನಗಳಲ್ಲಿ ರೈತರಿಗಾಗಿ ಗೆಡ್ಡೆ ಗೆಣಸು ಮತ್ತು ಸೊಪ್ಪು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗೆಡ್ಡೆ ಗೆಣಸಿನ ಅರಿವು ಮೂಡಿಸುವ ದೃಷ್ಟಿಯಿಂದ ಈಗಾಗಲೇ ನಡೆಸಲಾಗಿರುವ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟ್ ಕಾರ್ಡ್ನಲ್ಲಿ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಗೆಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಇದಲ್ಲದೆ ಸೊಪ್ಪು ಹಾಗೂ ಗೆಡ್ಡೆ ಗೆಣಸುಗಳ ತಾಜಾ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರ ನೀಡಿದರು. 

ಜ.4ರಂದು ಸಂಜೆ 6.30ರಿಂದ ರಾಜ್ಯ ಪ್ರಶಸ್ತಿ ವಿಜೇತ ಲಾಕುಂಭ ಕಲಾವಿದರಿಂದ ತುಳುನಾಡ ವೈಭವ ನೃತ್ಯರೂಪಕ, ಜ.೫ರಂದು ಅಪರಾಹ್ನ 2.30ರಿಂದ ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ ಬುಡಕಟ್ಟು ನೃತ್ಯ, ಸರಯೂ ಬಾಲ ಯಕ್ಷ ವೃಂದದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು. 

ಗ್ರಾಹಕ ಬಳಗದ ಅಧ್ಯಕ್ಷ ಎಸ್.ಎ. ಪ್ರಭಾಕರ ಶರ್ಮಾ, ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ, ಸಮಿತಿ ಸಂಚಾಲಕ ಎ. ಸೋಮಪ್ಪ ನಾಯ್ಕ, ರಾಮಚಂದ್ರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article