ಕ್ಯು ಆರ್ ಕೋಡ್ ಬದಲಾಯಿಸಿ 58 ಲಕ್ಷ ವಂಚನೆ

ಕ್ಯು ಆರ್ ಕೋಡ್ ಬದಲಾಯಿಸಿ 58 ಲಕ್ಷ ವಂಚನೆ

ಮಂಗಳೂರು: ಸೂಪರ್‌ವೈಸರ್ ಪೆಟ್ರೋಲ್ ಬಂಕ್‌ನ ಕ್ಯು ಆರ್ ಕೋಡ್ ಬದಲಾಯಿಸಿ ತನ್ನ ವೈಯುಕ್ತಿಕ ಬ್ಯಂಕ್ ಖಾತೆಯ ಕ್ಯು ಆರ್ ಕೋಡ್ ಹಾಕಿ ಬಂಕ್‌ಗೆ 58.85 ಲಕ್ಷ ರೂ. ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆಬಗ್ಗೆ ದೂರು ದಾಖಲಾಗಿದೆ. ಬಂಗ್ರಕೂಳೂರಿನ ರಿಲಯನ್ಸ್ ಔಟ್ಲೆಟ್ ಫ್ಯುಯೆಲ್ ಬಂಕ್ನಲ್ಲಿ ಸೂಪರ್ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ಮೋಹನದಾಸ್, ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆಯ ಸಂಪೂರ್ಣ ಜವಬ್ದಾರಿ ನೋಡಿಕೊಂಡಿದ್ದ.

ಈತ 2023ರ ಮಾ. 1ರಿಂದ ಜು. 31ರ ವರೆಗೆ ಪೆಟ್ರೋಲ್ ಬಂಕ್‌ನಲ್ಲಿ ಬಂಕ್ನ ಕ್ಯುಆರ್ ಕೋಡ್ ತೆಗೆದು ತನ್ನ ವೈಯಕ್ತಿಯ ಖಾತೆಯ ಕ್ಯುಆರ್ ಕೋಡನ್ನು ಅಳವಡಿಸಿ ಗ್ರಾಹಕರಿಗೆ ಬಂಕ್‌ನದ್ದೇ ಕ್ಯುಆರ್ ಕೋಡ್ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಿಲಯನ್ಸ್ ಔಟ್ಲೆಟ್ ಫ್ಯುಯೆಲ್ ಬಂಕ್ನ ಮ್ಯಾನೇಜರ್ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article