
ಸರಕಾರಿ ಪ.ಪೂ. ಕಾಲೇಜಿನ 8 ವಿವೇಕ ತರಗತಿಗಳನ್ಮು ಉದ್ಘಾಟಿಸಿದ ಶಾಸಕ ಕಾಮತ್
Sunday, January 26, 2025
ಮಂಗಳೂರು: ಸರಕಾರಿ ಪದವಿ ಪೂರ್ವ ಕಾಲೇಜು, ನಾಲ್ಯಪದವು, ಶಕ್ತಿನಗರ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಎಂಟು ವಿವೇಕ ತರಗತಿ ಕೊಠಡಿಗಳನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಎಂಟು ಕೊಠಡಿಗಳು ಮಾತ್ರವಲ್ಲದೇ ಇಲ್ಲಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕೊಠಡಿಗಳಿಗೆ ಒಟ್ಟಾರೆಯಾಗಿ 2.60 ಕೋಟಿ ರೂ. ಅನುದಾನ ಮಂಜೂರುಗೊಳಿಸಿ ಭೂಮಿಪೂಜೆ ನೆರವೇರಿಸಲಾಗಿತ್ತು. ಇದೀಗ ನಿರ್ಮಾಣ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆಗೊಂಡಿರುವ ಕಾಲೇಜಿನ ವಿವೇಕ ತರಗತಿ ಕೊಠಡಿಗಳಲ್ಲಿ ವಿವೇಕಾನಂದರಂತಹ ಜ್ಞಾನಿಗಳು ಮೂಡಿ ಬರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ. ಪುರುಷೋತ್ತಮ ಭಟ್, ಪಾಲಿಕೆ ಸದಸ್ಯರುಗಳಾದ ಕಿಶೋರ್ ಕೊಟ್ಟಾರಿ, ವನಿತಾ ಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಜಯಾನಂದ ಯನ್. ಸುವರ್ಣ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.