.jpeg)
ವಿದೇಶಿ ಮದ್ಯ ಮಾರಾಟ: ಬಂಧನ
Sunday, January 19, 2025
ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನ ರಸ್ತೆಯಲ್ಲೇ ವಿದೇಶಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣದ ಎರಡನೆ ಆರೋಪಿ ಯಕ್ಷಿತ್ ಎಂಬಾತನನ್ನು ಅಬಕಾರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶುಕ್ರವಾರ 6 ಲೀ. ವಿದೇಶಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ದಿನಕರ ಪಾಂಡೇಶ್ವರ ಎಂಬಾತನನ್ನು ಆತನ ದ್ವಿಚಕ್ರ ಸಹಿತ ಬಂಧಿಸಲಾಗಿತ್ತು. ಈ ಪ್ರಕರಣದ 2ನೇ ಆರೋಪಿ ವಿದೇಶಿ ಮದ್ಯ ಪೂರೈಕೆದಾರ ಯಕ್ಷಿತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.