
ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಪುನರಾಯ್ಕೆ
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವಿರೋಧವಾಗಿ ನಾಲ್ಕನೇ ಬಾರಿ ಪುನರಾಯ್ಕೆಯಾಗಿದ್ದಾರೆ.
ಮಂಗಳವಾರ ಕಾರ್‌ಸ್ಟ್ರೀಟ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಬ್ಯಾಂಕಿನ ಉಪಾಧ್ಯಕ್ಷರಾಗಿ ಜಗದೀಶ್ ಆಚಾರ್ಯ ಪಿ. ಪಡುಪಣಂಬೂರು ಅವರು ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಜಗದೀಶ್ ಆಚಾರ್ಯ ಉಡುಪಿ, ಶರತ್ ಕೆ. ಆಚಾರ್ಯ ಮಂಗಳೂರು, ಸೀತಾರಾಮ ಆಚಾರ್ಯ ಬೆಳುವಾಯಿ, ಭರತ್ ಲೋಕೇಶ್ ಆಚಾರ್ಯ ಮಂಗಳೂರು, ಭಾಸ್ಕರ ಆಚಾರ್ಯ ಡಿ. ಅಡಿಂಜೆ, ಹರಿಪ್ರಸಾದ್ ಮಂಗಳೂರು, ಗುರುಪ್ರಸಾದ್ ಶೆಟ್ಟಿ ಬಿ. ಮಂಗಳೂರು, ರೇಷ್ಮಾ ಮಂಗಳೂರು ಹಾಗೂ ಜಯಶ್ರೀ ವಿ. ಆಚಾರ್ ಎಸ್. ಮಂಗಳೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಮಂಗಳೂರು ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಚುನಾವಣಾಧಿಕಾರಿಯಾಗಿದ್ದು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಬಿ.ನಾಗೇಂದ್ರ ಪರಿಶೀಲನಾ ಅಧಿಕಾರಿಯಾಗಿದ್ದರು.
ಬ್ಯಾಂಕಿನ ಎಂ.ಡಿ. ವಸಂತ ಅಡ್ಯಂತಾಯ, ಹಿರಿಯ ನಿರ್ದೇಶಕ ಎ.ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಜಯಪ್ರಕಾಶ್ ಭಂಡಾರಿಬೆಟ್ಟು, ಮಾಜಿ ಉಪಾಧ್ಯಕ್ಷ ಯಶವಂತ ಕೆ., ಬ್ಯಾಂಕಿನ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷೆ ಯಶೋಧಾ, ಸದಸ್ಯರಾದ ಸುಮಂಗಲಾ, ಧೀರಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.