
ಫೆ.1 ಮತ್ತು 2ರಂದು ಸಮರ್ಪಣ್ ನೃತ್ಯೋತ್ಸವ
Tuesday, January 28, 2025
ಮಂಗಳೂರು: ನಗರದ ಬಿಜೈಯಲ್ಲಿರುವ ನೃತ್ಯಸಂಸ್ಥೆ ನೃತ್ಯಾಂಗನ್, ಪ್ರತಿ ವರ್ಷ ಆಯೋಜಿಸುವ ಸಮರ್ಪಣ್ ನೃತ್ಯೋತ್ಸವ ಕಾರ್ಯಕ್ರಮ ಈ ಬಾರಿ ಫೆ.1 ಮತ್ತು 2ರಂದು ಡಾನ್‌ಬಾಸ್ಕೋ ಸಭಾಂಗಣದಲ್ಲಿ ಜರುಗಲಿದೆ.
ಫೆ.1 ರಂದು ಸಂಜೆ 5.45ಕ್ಕೆ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್-ವಿದುಷಿ ಪ್ರೀತಿಕಲಾ ದಂಪತಿ ಉದ್ಘಾಟಿಸುವರು. ಬಳಿಕ ಇಟಲಿಯ ಕಲಾವಿದೆ ಲುಕ್ರೆಜಿಯಾ ಮ್ಯಾನಸ್ಕೋಟಿ ಹಾಗೂ ಬೆಂಗಳೂರಿನ ಸಂಜನಾ ರಾಜೇಶ್ ನೃತ್ಯಪ್ರದರ್ಶನ ನೀಡುವರು.
ಫೆ.2 ರಂದು ಸಂಜೆ 5.45ಕ್ಕೆ ಕಲಾಮಂಡಲಂ ಪ್ರಜೀಶಾ ಗೋಪಿನಾದ್, ಬೆಂಗಳೂರಿನ ಕಾವ್ಯಾ ಕಾಶೀನಾಥನ್ ಹಾಗೂ ಮಂಗಳೂರಿನ ಅಂಕಿತಾ ರೈ ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯವನ್ನು ಪ್ರಸ್ತುತಪಡಿಸುವರು. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.