
ಫೆ.2 ರಂದು ಹಿಂಜಾವೇಯಿಂದ ನೆಲ್ಲಿಕಾರಿನಲ್ಲಿ ಶೋಭಾಯಾತ್ರೆ ಮತ್ತು ಯುವ ಸಮಾವೇಶ
Tuesday, January 28, 2025
ಮೂಡುಬಿದಿರೆ: ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಆಶ್ರಯದಲ್ಲಿ ಫೆ.2 ರಂದು ನೆಲ್ಲಿಕಾರಿನಲ್ಲಿ ಶೋಭಾ ಯಾತ್ರೆ ಮತ್ತು ಯುವ ಸಮಾವೇಶ ನಡೆಯಲಿದೆ.
ಮಧ್ಯಾಹ್ನ 3.30ರಿಂದ ನೆಲ್ಲಿಕಾರು ಜಂಕ್ಷನ್‌ನಿಂದ ಗಣಪತಿ ಕಟ್ಟೆಯವರೆಗೆ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ನಂತರ ನಡೆಯುವ ಸಭಾ ಕಾಯ೯ಕ್ರಮದಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ಹಿಂಜಾವೇಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.