
ನಷ್ಟ ಭರಿಸಲು ಸಿದ್ಧ
Saturday, January 4, 2025
ಮಂಗಳೂರು: ಪುತ್ತೂರು ಮಹಮ್ಮದಿಯಾ ಉಮ್ರಾ ಗ್ರೂಪ್ ಸಂಸ್ಥೆಯಿಂದ ಮಕ್ಕಾಕ್ಕೆ ಉಮ್ರಾ ಮಾಡಲು ತೆರಳಿದ್ದ ಯಾತ್ರಾರ್ಥಿಗಳಿಗೆ ಆಗಿರುವ ತೊಂದರೆ ಬಗ್ಗೆ ಸಂಸ್ಥೆ ವಿಷಾದಿಸಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮತನಾಡಿದ ಸಂಸ್ಥೆಯ ಆಶ್ರಫ್ ಸಖಾಫಿ ಪರ್ಪುಂಜ, ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ. ಇದು ನನ್ನ ಬೇಜಾವಾಬ್ದಾರಿಯಿಂದ ಆಗಿದೆ. ಘಟನೆಗೆ ತೀವ್ರ ನೊಂದಿದ್ದೇನೆ,. ಸಂಕಷ್ಟಕ್ಕೆ ಒಳಗಾಗ ಯಾತ್ರಾರ್ಥಿಗಳಲ್ಲಿ ಕ್ಷಮೆ ಕೋರುತ್ತೇನೆ. ಆಗಿರುವ ನಷ್ಟದ ಹಣವನ್ನು ಹಿಂತಿರುಗಿಸಲು ಬದ್ಧನಿದ್ದೇನೆ ಎಂದರು.