
ಪ್ರವಾಸಿ ಕಾರು ತಂಗುದಾಣದ ಮೇಲ್ಛಾವಣಿಯನ್ನು ಉದ್ಘಾಟಿಸಿದ ಶಾಸಕ ಕಾಮತ್
Tuesday, January 21, 2025
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ 28ನೇ ವಾರ್ಡಿನ ಉರ್ವ ಮಾರ್ಕೆಟ್ ಹತ್ತಿರದ ನಾರಾಯಣ ಗುರು ಮಂದಿರದ ಬಳಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ಪ್ರವಾಸಿ ಕಾರು ತಂಗುದಾಣದ ಮೇಲ್ಛಾವಣಿಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಪ್ರವಾಸಿ ಕಾರು ಚಾಲುಕರದ್ದು ನಿರಂತರ ಪಯಣದ ಬದುಕು. ತಮ್ಮ ಬಳಿ ಬಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಊರು-ಮನೆ ತಲುಪಿಸುವುದೇ ಅವರ ಜವಾಬ್ದಾರಿಯುತ ಕಾಯಕ. ದಿನನಿತ್ಯದ ಬಹುಪಾಲು ಮನೆಯಿಂದ ಹೊರಗೆಯೇ ಕಳೆಯುವ ಅವರುಗಳಿಗೆ ಬಿಡುವಿನ ವೇಳೆಯಲ್ಲಿ ದಣಿವಾರಿಸಿಕೊಳ್ಳಲು ಇಂತಹ ಸುಸಜ್ಜಿತ ತಂಗುದಾಣಗಳಿದ್ದರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯರುಗಳಾದ ಸಂಧ್ಯಾ ಆಚಾರ್ಯ, ಗಣೇಶ್ ಕುಲಾಲ್, ಪೂರ್ಣಿಮಾ, ಮೋಹನ್ ಪೂಜಾರಿ, ರಾಧಾಕೃಷ್ಣ, ಮೋಹನ್ ಆಚಾರ್, ಶೇಖರ್, ಜಿತೇಶ್, ಗಣೇಶ್ ಸಾಲ್ಯಾನ್, ಮನೋಹರ್, ಹರೀಶ್, ರಾಜೇಶ್, ಆನಂದ ರೈ, ಪ್ರೀತಮ್, ಪ್ರಕಾಶ್, ರಘುನಾಥ ಪ್ರಭು, ಗುರು ಚರಣ್, ವಿಶು ಕುಮಾರ್, ಪ್ರಜೀತ್, ಕಿಶೋರ್, ಪ್ರಸಾದ್, ಮುರಳಿ ಮತ್ತಿತರರು ಉಪಸ್ಥಿತರಿದ್ದರು.