‘ಡಿಜಿಟಲ್ ಅರೆಸ್ಟ್’ ವಂಚನೆಯಿಂದ ಪಾರು

‘ಡಿಜಿಟಲ್ ಅರೆಸ್ಟ್’ ವಂಚನೆಯಿಂದ ಪಾರು

ಮಂಗಳೂರು: ನಗರದ ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯ ಮ್ಯಾನೇಜರ್ ಅವರ ಸಕಾಲಿಕ ಎಚ್ಚರಿಕೆಯಿಂದ ಹಿರಿಯ ವೃದ್ಧೆಯೊಬ್ಬರು ’ಡಿಜಿಟಲ್ ಅರೆಸ್ಟ್’ ವಂಚನೆಯಿಂದ ಕಳೆದುಕೊಳ್ಳುತ್ತಿದ್ದ 1.35 ಕೋಟಿ ರೂ. ರಕ್ಷಣೆಯಾಗಿದೆ. 

ಬ್ಯಾಂಕಿನ ಹಿರಿಯ ಗ್ರಾಹಕಿಯೊಬ್ಬರು ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯಲ್ಲಿ 1.35 ಕೋಟಿ ರೂ. ಫಿಕ್ಸೆಡ್ ಡಿಪಾಸಿಟ್ ಇರಿಸಿದ್ದರು ಮತ್ತು ಬ್ರಾಂಚ್ ಮ್ಯಾನೇಜರ್ ಅವರಲ್ಲಿ ಬಂದು ತಕ್ಷಣವೇ ಹಣವನ್ನು ನೀಡುವಂತೆ ಕೋರಿದರು. ಗ್ರಾಹಕರು ಬಹಳ ಆತಂಕದಿಂದ ಇರುವುದನ್ನು ಕಂಡ ಶಾಖೆಯ ಮ್ಯಾನೇಜರ್ ಏನೋ ತಪ್ಪಾಗಿದೆ ಎಂದು ಗ್ರಹಿಸಿದರು. 

ಮತ್ತೊಬ್ಬರೊಂದಿಗೆ ಗ್ರಾಹಕರು ಕರೆಯಲ್ಲಿ ನಿರತರಾಗಿದ್ದನ್ನು ಗಮನಿಸಿದ್ದು ಹಾಗೂ ಆಗಾಗ್ಗೆ ಪಾವತಿಯ ಪ್ರಗತಿಯ ಬಗ್ಗೆ ಅಪ್ಡೇಟ್ ಮಾಡುತ್ತಿದ್ದುದನ್ನು ಗಮನಿಸಿದ ಮ್ಯಾನೇಜರ್ ಅವರಿಗೆ ಅದು ಸೈಬರ್ ವಂಚನೆ (ಡಿಜಿಟಲ್ ಅರೆಸ್ಟ್) ಎಂಬ ಅನುಮಾನ ಬಂದಿತು. ಬ್ರಾಂಚ್ ಮ್ಯಾನೇಜರ್ ಗ್ರಾಹಕಿಯೊಂದಿಗೆ ಮಾತನಾಡಿದಾಗ ಸೈಬರ್ ವಂಚಕರು ಕಾರ್ಯಾಚರಣೆ ನಡೆಸುತ್ತಿದ್ದ ಅನುಮಾನ ಬಂದಿತು, ತಕ್ಷಣವೇ ಅವರು ಮಂಗಳೂರಿನ ನಗರ ಕ್ರೈಮ್ ಬ್ರಾಂಚ್ ಸಂಪರ್ಕಿಸಿದರು. ಪೊಲೀಸರು ನಂಬರ್ ಬ್ಲಾಕ್ ಮಾಡಲು ಮತ್ತು ಪ್ರಕರಣ ವರದಿ ಮಾಡಲು ಗ್ರಾಹಕರಿಗೆ ನೆರವಾದರು. ವಂಚಕರು ವೃದ್ಧೆ ಗ್ರಾಹಕಿಯನ್ನು ಪೊಲೀಸ್ ಅಧಿಕಾರಿಗಳು ಎಂದು ಹೇಳಿ ವಂಚಿಸಲು ಪ್ರಯತ್ನಿಸುತ್ತಿದ್ದರು. ಅವರು ಜಾರಿ ನಿರ್ದೇಶನಾಲಯ(ಇ.ಡಿ) ದಾಳಿಯಲ್ಲಿ ಅವರು ಈ ಗ್ರಾಹಕರಿಗೆ ಸೇರಿದ 300-400 ಡೆಬಿಟ್ ಕಾರ್ಡ್ ಗಳು ಸಿಕ್ಕಿದ್ದುಅದರಲ್ಲಿ ಒಂದು ಈ ಗ್ರಾಹಕಿಗೆ ಸೇರಿದೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article