
ನಿಷೇಧಿತ ಉಗ್ರ ಸಂಘಟನೆ ಪಿಎಫ್ಐ ಮುಖಂಡನ ಬಳಿ ಅಕ್ರಮ ಪಿಸ್ತೂಲು-ಹಿಂದೂಗಳ ಹತ್ಯೆಗೆ ಸಂಚು: ಉನ್ನತ ಮಟ್ಟದ ತನಿಖೆಗೆ ವಿಹೆಚ್ ಪಿ ಆಗ್ರಹ
ಮಂಗಳೂರು: ಮಂಗಳೂರಿನ ಮೂಡುಶೆಡ್ಡೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಪಿಎಫ್ಐ ಮುಖಂಡ ಬದ್ರುದ್ದೀನ್ ಅಕ್ರಮ ಪಿಸ್ತೂಲಿನಿಂದ ಗುಂಡು ಹರಿಸಿದ ಪರಿಣಾಮ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಅಕ್ರಮವಾಗಿ ಪಿಸ್ತೂಲು ಮದ್ದುಗುಂಡುಗಳನ್ನು ಇಟ್ಟುಕೊಂಡು ಹಿಂದುಗಳ ಮತ್ತು ಹಿಂದೂ ಮುಖಂಡರ ಕೊಲೆಗೆ ಸಂಚು ರೂಪಿಸಿತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಪಿಎಫ್ಐ ಸಂಘಟನೆಯನ್ನು ಇಂತಹದ್ದೇ ಕಾರಣಕ್ಕಾಗಿ ನಿಷೇದಿಸಿದ್ದು, ಅಲ್ಲದೆ ಇದರ ಮುಖಂಡರು ಅಕ್ರಮ ಪಿಸ್ತೂಲು ಹೊಂದಿರುವುದು ಇಡೀ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ವಿಹೆಚ್ ಪಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.
NIA ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಮನವಿ:
ಮಂಗಳೂರು ಸೇರಿದಂತೆ ಕರಾವಳಿ ಉಗ್ರರಿಗೆ ಭಯೋತ್ಪಾದಕ ಚಟುವಟಿಕೆಗಳ ಪ್ರಯೋಗ ಶಾಲೆಯಾಗುತ್ತಿದ್ದು, ಇದರ ಹಿಂದೆಯೂ ದೀಪ್ತಿ ಮಾರ್ಲ ಪ್ರಕರಣ ಮತ್ತು ಮಂಗಳೂರಿನಲ್ಲಿ ಕೆಲವೆಡೆ NIA ದಾಳಿ ನಡೆಸಿದಾಗ ನಮ್ಮ ಸಂಘಟನೆ NIA ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಮನವಿ ಮಾಡಿದ್ದು, ಸಂಸದರು ಇದರ ಬಗ್ಗೆ ಪ್ರಯತ್ನಿಸುತ್ತಿದ್ದು, ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು NIA ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ವಿಹೆಚ್ ಪಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.