
ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
Friday, January 10, 2025
ಪುತ್ತೂರು: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ನರಿಮೊಗರು ಗ್ರಾಮದ ಮುಗೇರಡ್ಕ ಕೂಡುರಸ್ತೆ ನಿವಾಸಿ ಕೇಶವ ಜೋಗಿ ಎಂಬವರ ಪುತ್ರಿ ವಿದ್ಯಾರ್ಥಿನಿ ದೀಕ್ಷಿತಾ ಜೋಗಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿರುವ ದೀಕ್ಷಿತಾ ಜೋಗಿ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜಿನಿಂದ ಮನೆಗೆ ತಡವಾಗಿ ಬಂದ ಈಕೆಯನ್ನು ತಾಯಿ ಯಾಕೆ ತಡವಾಗಿದ್ದು ಎಂದು ಪ್ರಶ್ನಿಸಿದ್ದಾರೆ. ಕಾಲೇಜು ಬಿಡುವಾಗ ತಡವಾಗಿದೆಯಾ ಎಂದು ಕಾಲೇಜಿನ ಶಿಕ್ಷಕರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ ಕೇಶವ ಜೋಗಿ, ತಾಯಿ ಪುಷ್ಪಾ ಹಾಗೂ ಸಹೋದರ ದೀಕ್ಷಿತ್ ಎಂಬವರನ್ನು ಅಗಲಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.