
ಮುಡಾ ಕಚೇರಿ ಕಾಂಗ್ರೆಸ್ ಕಚೇರಿ ಆಗಿದೆಯೆ?: ಶಾಸಕ ಡಾ. ಭರತ್ ಶೆಟ್ಟಿ ಪ್ರಶ್ನೆ
Thursday, January 9, 2025
ಮಂಗಳೂರು: ಮುಡಾ ಕಚೇರಿಯಲ್ಲಿ ಮಧ್ಯವರ್ತಿ ಹಾಗೂ ಪ್ರಮುಖ ಪಕ್ಷ ವೊಂದರಲ್ಲಿ ಕಾರ್ಯಕರ್ತನಾಗಿರುವ ಪುಡಾರಿಯೊಬ್ನ ಅನಧಿಕೃತವಾಗಿ ಕಡತವನ್ನೇ ತಿದ್ದು ಮಾಡಿದ್ದನ್ನು ನೋಡಿದರೆ ಮುಡಾ ಕಚೇರಿ ಕಾಂಗ್ರೆಸ್ ಕಚೇರಿ ಆಗಿದೆಯೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಕಡತವನ್ನು ಪೆನ್ನಲ್ಲಿ ತಿದ್ದುವ ವೀಡಿಯೋ ಬಹಿರಂಗಗೊಂಡಿದೆ. ರಾಜಾ ರೋಷವಾಗಿ ಇಂತಹ ಅಕ್ರಮ ಕೆಲಸ ಮಾಡಲು ಮಧ್ಯವರ್ತಿಯೊಬ್ಬನಿಗೆ ಅಧಿಕಾರ ಕೊಟ್ಟವರು ಯಾರು.ಈತ ಕಾಂಗ್ರೆಸ್ ಕಾರ್ಯಕರ್ತನಾಗಿರುವುದರಿಂದ ಪೊಲೀಸ್ ಕೇಸ್ ದಾಖಲಿಸಲೂ ಅಧಿಕಾರಿಗಳು ಹಿಂದೆ ಮುಂದೆ ನೋಡುವಂತಾಗಿದೆ. ಮಹತ್ವದ ಕಡತಗಳು ಕೂಡ ಅಕ್ರಮ ತಿದ್ದುಪಡಿಯಾಗಿರುವ ಸಾಧ್ಯತೆಯಿದ್ದು ಅಕ್ರಮವನ್ನು ಸಕ್ರಮ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ. ಪ್ರಕರಣವನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕು ಎಂದವರು ಒತ್ತಾಯಿಸಿದ್ದಾರೆ.