
ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಬೇಕಾದರೆ ಶಿಕ್ಷಣ, ಉದ್ಯೋಗ, ಸಮಾನತೆ ಅಗತ್ಯ: ಡಾ. ಹೆಚ್.ಆರ್. ತಿಮ್ಮಯ್ಯ
Friday, January 24, 2025
ಮಂಗಳೂರು: ಹೆಣ್ಣು ಮಗುವಿನ ಪ್ರಾಮುಖ್ಯತೆ ಆಕೆಯ ಕುಟುಂಬದಲ್ಲಿ, ಸಮಾಜದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ನಿರ್ವಹಿಸುತ್ತಿರುವ ಹಲವು ಜವಾಬ್ದಾರಿಗಳ ಮೂಲಕ ಹೆಣ್ಣು ಸಂಸಾರದ ಕಣ್ಣು ಎಂಬುದರ ಮೂಲಕ ಯಶಸ್ವಿ ಮಹಿಳೆಯಾಗಿ, ತಾಯಿಯಾಗಿ ಗುರುತಿಸಿಕೊಂಡಿರುತ್ತಾಳೆ. ಇಂತಹ ಮಹಿಳೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳು ದೊರೆಯಬೇಕಾದರೆ ಶಿಕ್ಷಣ, ಉದ್ಯೇಗ ಇತ್ಯಾದಿ ಕ್ಷೇತ್ರದಲ್ಲಿ ಸಮಾನತೆಯನ್ನು ಕಲ್ಲಿಸಿಕೊಡಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಹೇಳಿದರು.
ಅವರು ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಹೆಣ್ಣು ಮಗುವಿನ ಸಂಕೇತವನ್ನು ಸೂಚಿಸುವ ಪಿಂಕ್ ಬಲೂನುಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಜಿಲ್ಲಾ ಆರ್.ಸಿ.ಹೆಚ್ ಡಾ. ರಾಜೇಶ್ ಅವರು ಹೆಣ್ಣು ಮಗುವಿನ ಪ್ರಾಮುಖ್ಯತೆಯ ಬಗ್ಗೆ ಸಮಯೋಚಿತ ಮಾತುಗಳನ್ನು ಆಡಿದರು.
ಕುಟುಂಬ ಕಲ್ಯಾಣ ಅಧಿಕಾರಿ, ಕಾರ್ಯಕ್ರಮ ಅನುಷ್ಠಾನಾಧಿಕಾರಿಯಾಗಿರುವ ಡಾ. ದೀಪಾಪ್ರಭು ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ತಡೆಗಟ್ಟುವಿಕೆ, ಫೋಕ್ಸೋ ಕಾಯ್ದೆ, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಜಿಲ್ಲೆಯಲ್ಲಿರುವ ಪ್ರಸ್ತುತ ಲಿಂಗಾನುಪಾತ ಹಾಗೂ ಹಿಂದಿನ ಲಿಂಗಾನುಪಾತ ಇದರ ಸರಿದೊಗಿಸುವಲ್ಲಿ ನಮ್ಮ ಜವಾಬ್ದಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಜೊತೆಗೆ ಎಲ್ಲಾ ಕಡೆ ಹೆಣ್ಣು ಮಗುವಿನ ಸಂರಕ್ಷಣೆ, ವಿದ್ಯಾಭ್ಯಾಸ, ಆರೋಗ್ಯಕರ ಬೆಳವಣಿಗೆ ಕುರಿತು ಜಾಗೃತಿ, ಅರಿವನ್ನು ಮೂಡಿಸಲು ತಿಳಿಸಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧಿಕಾರಿ ಡಾ. ನವೀನ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮದ ನಿರೂಪಿಸಿದರು.