
ಬ್ರಾಹ್ಮಣ್ಯಶಾಹಿತನದ ವಿರುದ್ಧ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ: ಶಿವಸುಂದರ್
ಮಂಗಳೂರು: ಕುಂಭಮೇಳದ ಸಂದರ್ಭ ಮನುವಾದಿಗಳು ಪರ್ಯಾಯ ಸಂವಿಧಾನ ರಚಿಸುವ ಘೋಷಣೆ ಮಾಡಿದ್ದಾರೆ. ರಾಮರಾಜ್ಯ, ಚಾಣಕ್ಯ, ಮನುಸ್ಮೃತಿ ಆಧಾರದಲ್ಲಿ ಸಂವಿಧಾನ ರಚನೆ ಮಾಡುವ ಘೋಷಣೆ ಮಾಡಿದ್ದಾರೆ. ಈ ದೇಶದಲ್ಲಿ ಮೂರುವರೆ ಸಾವಿರ ವರ್ಷಗಳಿಂದ ಬ್ರಾಹ್ಮಣ ಶಾಹಿ ಸಿದ್ಧಾಂತವಿದ್ದು ನಾವದನ್ನು ಸೋಲಿಸಬೇಕು ಎಂದು ಅಂಕಣಕಾರ, ಬರಹಗಾರ ಶಿವಸುಂದರ್ ಕರೆ ನೀಡಿದ್ದಾರೆ.
ಅವರು ಮಂಗಳೂರಿನ ಪುರಭವನದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣ, ದ.ಕ ಜಿಲ್ಲಾ ಶಾಖೆಯು ಭಾರತ ಸಂವಿಧಾನ ಜಾರಿಯಾಗಿ 75ನೇ ವರ್ಷಾಚರಣೆ ಹಾಗೂ ದಲಿತ ಸಂಘರ್ಷ ಸಮಿತಿಯ 50ರ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದ ಸಂವಿಧಾನದ ಆಶಯಗಳು ಮತ್ತು ಮನುವಾದಿಗಳ ಷಡ್ಯಂತ್ರಗಳು” ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.
“ಸ್ವಾತಂತ್ರ ಹೋರಾಟದ ಸಮಯದಲ್ಲಿ ಸಾವರ್ಕರ್, ಗೋವಳ್ಕರ್‌ರಂತವರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಅವರು ಭಾರತದ ಜನರನ್ನು ಬ್ರಿಟಿಷರೊಂದಿಗೆ ಸೇರಿಸಿ ಸೈನ್ಯದ ತರಬೇತಿ ಪಡೆದು ಮುಸ್ಲಿಂ ಮತ್ತು ದಲಿತರ ವಿರುದ್ದ ಹೋರಾಟಕ್ಕೆ ಸಜ್ಜುಗೊಳಿಸಿದ್ದರು. ಅವರು ಇದೀಗ ಸಾವರ್ಕರ್ ವಾದಿಗಳು ಮತ್ತೆ ಬ್ರಾಹ್ಮಣ್ಯವನ್ನು ಹೇರುವ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಸೈದ್ಧಾಂತಿಕವಾಗಿ ಒಟ್ಟಾಗಿ ಆಂತರಿಕ ಬ್ರಾಹ್ಮಣ್ಯಶಾಹಿತನದ ವಿರುದ್ಧ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ಆಗಬೇಕಿದೆ“ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
”ಇತ್ತೀಚಿಗೆ ಮೋಹನ್ ಭಾಗವತ್ ಭಾಷಣ ಮಾಡಿ, ಜನವರಿ 22, 2024ರಲ್ಲಿ ರಾಮಮಂದಿರ ಲೋಕಾರ್ಪಣೆಯಾದ ದಿನವೇ ನಮಗೆ ನಿಜವಾದ ಸ್ವಾತಂತ್ರ್ಯ ಬಂತು ಎಂದು ಹೇಳಿದ್ದಾರೆ. ಆರೆಸ್ಸೆಸ್ ನವರು ಸರ್ಕಾರವನ್ನು ನಿಯಂತ್ರಿಸುವವರು. ಕೇಶವ ಕೃಪ ನಮ್ಮನ್ನು ಆಳುತ್ತಿದೆ. ಆರೆಸ್ಸೆಸ್ ಗೆ ನೂರು ವರ್ಷ ಆಗುವ ಹೊತ್ತಿಗೆ ಭಾರತವನ್ನು ಹಿಂದೂ ರಾಷ್ಟ ಮಾಡಲು ಹೊರಟಿದ್ದಾರೆ. ಅವರ ರಾಮ ಸೀತೆಯ ಅವಮಾನಿಸಿವನು. ಅವರ ರಾಮ ಶೂದ್ರ ಶಂಬೂಕನನ್ನು ಕೊಂದವನು, ನೀತಿ ಉಲ್ಲಂಘಿಸಿ ವಾಲಿಯನ್ನು ಕೊಂದವನು. ಮೋಸದಿಂದ ರಾವಣನನ್ನು ರಾಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ ರೈ,‘ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನವರ್ಗದ ಸಂಘಟನೆ ದಲಿತ ಸಂಘಟನೆ, ಇದರ ಹೋರಾಟ ನಡೆದು ಬಂದ ದಾರಿ, ಇತಿಹಾಸಸದ ನೆನಪುಗಳಿಂದ ವರ್ತಮಾನದ ಹೇಗೆ ಬದುಕಬೇಕೆಂಬ ವಿಚಾರ ಮಂಥನ ನಡೆಯಬೇಕಿದೆ ಎಂದರು.
‘ದಲಿತ ಸಂಘರ್ಷ ಸಮಿತಿಯ ಹುಟ್ಟು, ಹೋರಾಟ ಹಾಗೂ ನಮ್ಮ ಮುಂದಿರುವ ಸವಾಲುಗಳು’ ಎಂಬ ಬಗ್ಗೆ ಕೇಂದ್ರೀಯ ವಿ.ವಿ ಕಲಬುರಗಿ ಇದರ ಪ್ರಾಧ್ಯಾಪಕರಾದ ಅಪ್ಪೆಗೆರೆ ಸೋಮಶೇಖರ್, ವಿಚಾರ ಮಂಥನ ಮಾಡಿದರು.
ಕೃಷ್ಣಾನಂದ ಡಿ. ಪ್ರಾಸ್ತಾವಿಕ ಮಾತನಾಡಿದರು. ದ.ಸಂ.ಸ. ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು. ಡಾ| ಬಿ.ಆರ್ ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರವರ ಭಾವಚಿತ್ರಕ್ಕೆ ದಲಿತ ನೌಕರರ ಒಕ್ಕೂಟದ ದ.ಕ. ಜಿಲ್ಲಾ ಉಸ್ತುವಾರಿ ಹೆಚ್.ಡಿ. ಲೋಹಿತ್ ಮಾಲಾರ್ಪಣೆ ಮಾಡಿದರು.
ಶಿವಸುಂದರ್ ವಿರಚಿತ ’ಸಂವಿಧಾನ ವರ್ಸಸ್ ಸಂವಿಧಾನ ಅಭಿಯಾನ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ದ.ಸಂ.ಸ. ಹಿರಿಯ ಮುಖಂಡ ಆನಂದ ಮಿತ್ತಬೈಲ್, ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೃಷ್ಣಾನಂದ, ದ.ಸಂ.ಸ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ದ.ಸಂ.ಸ. ರಾಜ್ಯ ಸಂಚಾಲಕ ಎಂ.ದೇವದಾಸ್, ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್., ಅಣ್ಣು ಸಾಧನ ಉಪಸ್ಥಿತರಿದ್ದರು.