ರಾಷ್ಟ್ರೀಯ ಬೀದಿ ವ್ಯಾಪಾರ ದಿನಾಚರಣೆ ಸಿಐಟಿಯು ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆ

ರಾಷ್ಟ್ರೀಯ ಬೀದಿ ವ್ಯಾಪಾರ ದಿನಾಚರಣೆ ಸಿಐಟಿಯು ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆ


ಮಂಗಳೂರು: ದೇಶದ ಬೀದಿ ವ್ಯಾಪಾರಿಗಳ ಐಕ್ಯತೆಯ ಹೋರಾಟದಿಂದ ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾನೂನು ಜಾರಿಗೆ ಬಂದಿದೆ ಆದರೆ ಸ್ಥಳೀಯ ಆಡಳಿತಗಳು ಅನುಷ್ಠಾನ ಮಾಡದೆ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಅವರು ಇಂದು ರಾಷ್ಟ್ರೀಯ ಬೀದಿ ವ್ಯಾಪಾರಿಗಳ ದಿನಾಚರಣೆಯ ಅಂಗವಾಗಿ ನಗರದ ಪುರಭವನದ ಬಳಿ ನಡೆದ ಬೀದಿ ವ್ಯಾಪಾರಿಗಳ ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


ಟೈಗರ್ ಕಾರ್ಯಚರಣೆಯ ಸಮಯದಲ್ಲಿ 33 ವ್ಯಾಪಾರ ವಲಯ ಘೋಷಣೆ ಮಾಡಿದ್ದ ಬಿಜೆಪಿಯ ನಗರಾಡಳಿತ ಈಗ ಒಂದು ವಲಯ ಮಾಡಿರುವುದೇ ಸಾಧನೆ ಎಂದು ತನ್ನ ಬೆನ್ನನ್ನೇ ತಾನು ತಟ್ಟಿಕೊಳ್ಳುತ್ತಿದೆ ಎಂದು ಟೀಕೆಸಿದ ಅವರು ಮಂಗಳೂರಿನ ಬೀದಿ ವ್ಯಾಪಾರಿಗಳ ಚಳುವಳಿಗೆ 15 ವರ್ಷಗಳ ಸುಧೀರ್ಘ ಇತಿಹಾಸವಿದೆ. ಕೆಂಬಾವುಟ ಮಾತ್ರ ಮಂಗಳೂರಿನ ಬೀದಿ ವ್ಯಾಪಾರಿಗಳಿಗೆ ರಕ್ಷಣೆ ನೀಡಿದ್ದು ಹೋರಾಟ ಮತ್ತು ಸಂಘಟನೆಯಿಂದ ಮಾತ್ರ ನಮ್ಮ ಹಕ್ಕುಗಳ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು.


ಅಸಹ್ಯ ಚಾಯಿವಾಲನನ್ನು ಕರೆಸಿ ಮಂಗಳೂರಿನ ಮಾನ ಹರಾಜಿಗಿಟ್ಟರು: ಬಿ.ಕೆ. ಇಮ್ತಿಯಾಜ್ 

ಮಂಗಳೂರಿನ ಲೇಡಿಹಿಲ್, ಮಣ್ಣಾಗುಡ್ಡೆ ಪರಿಸರದ ಬೀದಿ ಆಹಾರ ಮಾರಾಟಗಾರರ ಗೂಡOಗಡಿಗಳ ಮೇಲೆ ಬುಲ್ದೊಜರ್ ಹಾಯಿಸಿ ಅವರ ಬದುಕನ್ನು ನಾಶ ಮಾಡಿದವರು ಇಂದು ಅಸಹ್ಯವಾಗಿ ಟೀ ಮಾಡಿಕೊಡುವ ಡಾಲಿ ಚಾಯಿವಾಲನ್ನು ಕರೆಸಿ ಶುಚಿತ್ವ ಮತ್ತು ಗುಣಮಟ್ಟಕ್ಕೆ ಒತ್ತು ಕೊಡುವ ಮಂಗಳೂರಿಗರ ಪ್ರಜ್ಞಾವಂತಿಕೆಯನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ಬಿಜೆಪಿ ಮುಖಂಡರು ಹರಾಜಿಗಿಟ್ಟರು ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿಕೆ ಇಮ್ತಿಯಾಜ್ ಹೇಳಿದರು. 

ನಗರದಲ್ಲಿ ನೂರಾರುಬಡ ಚಾಯಿವಾಲಗಳ ಬದುಕು ನಾಶ ಮಾಡಿ ವಾರಗಟ್ಟಲೆ ರಸ್ತೆಗಳನ್ನು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡಿ ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಕಾನೂನು ಪರಿಪಾಲಕರೇ ಆಯೋಜಕರ ಪರ ನಿಂತಿರುವುದು ದುರಾದೃಷ್ಟ ಎಂದು ಹೇಳಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ಉಪಾಧ್ಯಕ್ಷ ವಿಜಯ ಜೈನ್ ವಂದಿಸಿದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಮುಜಾಫರ್ ಅಹ್ಮದ್, ಮಾಜಿ ಅಧ್ಯಕ್ಷ ಹಸನ್ ಬೆಂಗ್ರೆ,ಮುಖಂಡರಾದ ಹಸನ್ ಕುದ್ರೋಳಿ, ಹಂಝ, ಸಿಕಂದರ್ ಬೇಗ್, ವಿಜಯ ಜೈನ್, ಕಾಜ ಮೋಹಿಯುದ್ದಿನ್, ಎಂ.ಎನ್. ಶಿವಪ್ಪ, ಚಂದ್ರಶೇಖರ ಭಟ್, ಅಬ್ದುಲ್ ಖಾದರ್, ಮೇಬಲ್ ಡಿಸೋಜ, ಫಿಲೋಮೀನ, ಲೀನಾ ಡಿಸೋಜಾ, ಗುಡ್ಡಪ್ಪ, ಸಲೀಮ್, ರಫೀಕ್, ಸಲಾಂ ಸುರತ್ಕಲ್, ಹನೀಫ್ ಇಡ್ಯಾ, ಹರೀಶ್ ಬೈಕಂಪಾಡಿ, ಹಕೀಮ್ ಸ್ಟೇಟ್ ಬ್ಯಾಂಕ್, ಯಶೋಧರ ಬೈಕಂಪಾಡಿ, ಬಾಲಕೃಷ್ಣ ಸುರತ್ಕಲ್, ಹನೀಫ್ ಬೆಂಗ್ರೆ, ಮುತ್ತುರಾಜ್, ಖಾದರ್ ವಾಮಂಜೂರ್, ನೌಷಾದ್ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯೇಕ ಎರಡು ಕಾರ್ಯಕ್ರಮಗಳಿಂದ ಬೀದಿ ವ್ಯಾಪಾರ ದಿನಾಚರಣೆ ತೀವ್ರ ಕುತೂಹಲ ಕೆರಳಿಸಿತ್ತು. ಪೊಲೀಸರು ಬಿಗು ಪೊಲೀಸ್ ಬಂದೋಬಸ್ತ್  ಏರ್ಪಡಿಸಿದ್ದರು.

ಪುರಭವನದ ಒಳಗೆ ಆಡಂಬರ ಮತ್ತು ಲಕ್ಷಾಂತರ ರೂ. ಖರ್ಚು ಮಾಡಿ ಬಿರಿಯಾನಿ ನೀಡುವ ಕಾರ್ಯಕ್ರಮ ನಡೆಯುತ್ತಿರುವಾಗಲೇ ಪುರಭವನದ ಹೊರಗೆ ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದರೂ ಕೇವಲ 800 (ಎಂಟು ನೂರು ರೂಪಾಯಿ) ಖರ್ಚು ಮಾಡಿದ ಹಕ್ಕೊತ್ತಾಯ ಸಭೆಗೆ ನಗರದ ವಿವಿಧ ಪ್ರದೇಶಗಳಿಂದ ಇನ್ನೂರಕ್ಕೂ ಮಿಕ್ಕಿ ಬೀದಿ ವ್ಯಾಪಾರಿಗಳು ಹಕ್ಕೊತ್ತಾಯ ಸಭೆಯಲ್ಲಿ ಸೇರಿದ್ದರು ಇದು ಕೆಂಬಾವುಟದ ಶಕ್ತಿ ಎಂದು ಬಿಕೆ ಇಮ್ತಿಯಾಜ್ ಹೇಳಿದರು.

ಹಕ್ಕೊತ್ತಾಯ ಸಭೆಯ ನಿರ್ಣಯಗಳು:

1.ನಗರದ ಎಲ್ಲಾ ವಾರ್ಡ್ ಗಳಲ್ಲಿ ಬೀದಿವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ ಐಡಿ ಕಾರ್ಡ್, ಪ್ರಮಾಣ ಪತ್ರ ವಿತರಿಸಬೇಕು.

2. ನಿವೇಶನ ರಹಿತ ಬೀದಿ ವ್ಯಾಪಾರಿಗಳಿಗೆ ಮನೆ ನಿವೇಶನ ಒದಗಿಸಬೇಕು.

3. ಬೀದಿ ವ್ಯಾಪಾರಿಗಳ ಆರೋಗ್ಯಕ್ಕಾಗಿ ಉಚಿತ  ವೈದ್ಯಕೀಯ ಸವಲತ್ತು ಪಡೆಯಲು ಆರೋಗ್ಯ ಕಾರ್ಡ್ ವಿತರಿಸಬೇಕು.

4. ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯ ಸಾಲ ಮಿತಿಯನ್ನು  ಒಂದು ಲಕ್ಷದಿಂದ ಹತ್ತು ಲಕ್ಷಕ್ಕೆ ಏರಿಸಬೇಕು.

5. ಎಲ್ಲ ಬೀದಿ ವ್ಯಾಪಾರಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು.

6. ನಗರ ಪಾಲಿಕೆ ಮತ್ತು ಪೋಲೀಸರ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ನಿವಾರಣಾ ಸಮಿತಿ ರಚಿಸಬೇಕು.

7. ಕಂಟೋನ್ಮೆಂಟ್ ವಾರ್ಡಿಂನಂತೆ ಸೆಂಟ್ರಲ್ ಮಾರ್ಕೆಟ್ ವಾರ್ಡಿನಲ್ಲಿ ವ್ಯಾಪಾರ ವಲಯ ಆರಂಭವಾದ ನಂತರವೇ ಸ್ಟೇಟ್ ಬ್ಯಾಂಕ್ ಪರಿಸರದ ಬೀದಿ ವ್ಯಾಪಾರಿಗಳನ್ನು ವಲಯಕ್ಕೆ ಸ್ಥಳ ಅಂತರಿಸಬೇಕು.

8. ವ್ಯಾಪಾರ ವಲಯವನ್ನು ವ್ಯಾಪಾರಿ ಮತ್ತು ಗ್ರಾಹಕ ಸ್ನೇಹಿಯಾಗಿ ವೈಜ್ಞಾನಿಕ ಮತ್ತು ಸುರಕ್ಷತೆಗೆ ಒತ್ತು ಕೊಟ್ಟು ನಿರ್ಮಿಸಬೇಕು.

9. ಮಂಗಳೂರು ನಗರದ ಹತ್ತು ಕಡೆಗಳಲ್ಲಿ ಆಹಾರ ಮಾರಾಟ ವಲಯ ನಿರ್ಮಿಸಬೇಕು.

ಹಕ್ಕೊತ್ತಾಯ ಸಭೆಯಲ್ಲಿ ಈ ಮೇಲಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article