
ಎಣ್ಮಕಜೆಯಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆಯ ಸಾಹಸ್ ಪರ್ಯಟನೆ
Thursday, January 9, 2025
ಮಂಜೇಶ್ವರ: ಮಹಿಳಾ ಕಾಂಗ್ರೆಸ್ ರಾಜ್ಯಧ್ಯಕ್ಷೆ ಸಂಸದೆ ನ್ಯಾಯವಾದಿ ಜೆಬಿ ಮೆತರ್ ನೇತೃತ್ವದಲ್ಲಿ ನಡೆಯುವ ರಾಜ್ಯ ಮಟ್ಟದ ಮಹಿಳಾ ಸಾಹಸ್ ಪರ್ಯಟನೆ ಎಣ್ಮಕಜೆ ಮಂಡಲದ ವತಿಯಿಂದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಜರಗಿತು.
ಯುವ ಕಾಂಗ್ರೆಸ್ ಬಲಿದಾನಿ ಅಬ್ದುಲ್ ಜಬ್ಬಾರ್ ಅವರ ಮನೆಗೆ ಭೇಟಿ ನೀಡಿ ಪರ್ಯಟನೆ ಆರಂಭಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ನೈಯಂಟಿಗರ ಸನಲ್ ಉದ್ಘಾಟಿಸಿದರು.
ಮಂಡಲಾಧ್ಯಕ್ಷೆ ಸತ್ಯಭಾಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್, ರಾಜ್ಯ ಉಪಾಧ್ಯಕ್ಷೆ ರಜನಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್., ಕುಸುಮಾವತಿ ಮತ್ತಿತರರು ಮಾತನಾಡಿದರು. ಮಹಿಳಾ ಕಾಂಗ್ರೆಸ್ ನೇತಾರರಾದ ಶಾರದ ವೈ, ಶಾಂತ ಟೀಚರ್, ಜಯಶ್ರೀ ಕುಲಾಲ್, ಗ್ರಾ.ಪಂ. ಸದಸ್ಯ ರಾಧಾಕೃಷ್ಣ ನಾಯಕ್, ಮಹಿಳಾ ಜಿಲ್ಲಾ ಸಮಿತಿ, ವಿವಿಧ ವಾರ್ಡ್ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.