
ಮೂಡುಬಿದಿರೆ ಮಸೀದಿ ಬಳಿ ಕುಡಿಯುವ ನೀರಿನ ಘಟಕ ಉದ್ಘಾಟನೆ
Friday, January 17, 2025
ಮೂಡುಬಿದಿರೆ: ಮೂಡುಬಿದಿರೆ ಜುಮ್ಮಾ ಮಸೀದಿ ಮತ್ತು ಇರುವೈಲ್ ರಸ್ತೆ ಅಂಗಡಿ ಮಾಲಕರ ಸಂಘದ ವತಿಯಿಂದ ನಿರ್ಮಿಸಲಾದ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರು ಶುಕ್ರವಾರ ಮಧ್ಯಾಹ್ನ ಉದ್ಘಾಟಿಸಿದರು.
ಮಸೀದಿ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್, ಕಾರ್ಯದರ್ಶಿ ಮುಹಮ್ಮದ್ ನದೀಮ್, ಜತೆ ಕಾರ್ಯದರ್ಶಿ ಪಿ.ಎಚ್. ಮುಹಮ್ಮದ್ ಹುಸೈನ್, ಪುರಸಭಾ ಸದಸ್ಯ ಇಕ್ಬಾಲ್ ಕರೀಮ್, ಅಂಗಡಿ ಮಾಲಕರಾದ ಶಿವಾನಂದ ಪ್ರಭು,ಸನತ್ ಜೈನ್, ಬದ್ರುದ್ದೀನ್, ಹನೀಫ್ ರಹ್ಮಾನಿಯಾ, ಬಶೀರ್, ಮಹೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.