
ಮೂಡುಬಿದಿರೆ ಕಾರ್ಮೆಲ್ ಶಾಲೆಯ ಅಶ್ವಿಲ್ ನೀಲ್ ಲೋಬೋಗೆ ಡಾ. ಶಿವರಾಮ ಕಾರಂತ ಬಾಲಪ್ರತಿಭಾ ಪುರಸ್ಕಾರ
Saturday, January 11, 2025
ಮೂಡುಬಿದಿರೆ: ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಕೋಟ ತಟ್ಟು ಗ್ರಾಮ ಪಂಚಾಯತ್ ಕೋಟ ಇವರ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತ ಬಾಲ ಪ್ರತಿಭಾ ಪುರಸ್ಕಾರ ಪ್ರಧಾನ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಕಾರ್ಮೆಲ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಅಶ್ವಲ್ ನೀಲ್ ಲೋಬೋ ಬಹುಮುಖ ಪ್ರತಿಭೆ ವಿಭಾಗದಲ್ಲಿ ಬಾಲ ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾರೆ.
ಸಮಾರಂಭದಲ್ಲಿ ಡಾ. ಕಾರಂತ ಪ್ರತಿಷ್ಠಾನ ಕೋಟ ಇದರ ಆಡಳಿತ ನಿರ್ದೇಶಕ ಕೋಟ ಶ್ರೀನಿವಾಸ ಪೂಜಾರು ಅಧ್ಯಕ್ಷ ಅನಂದ ಸಿ. ಕುಂದರ್ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.